ಎಸ್ತೇರಳು 3:6 - ಪರಿಶುದ್ದ ಬೈಬಲ್6 ಮೊರ್ದೆಕೈ ಯೆಹೂದ್ಯ ಜನಾಂಗಕ್ಕೆ ಸೇರಿದವನೆಂದು ಹಾಮಾನನಿಗೆ ತಿಳಿದುಬಂತು. ಕೇವಲ ಮೊರ್ದೆಕೈಯನ್ನು ಮಾತ್ರವೇ ಕೊಲ್ಲದೆ ಅಹಷ್ವೇರೋಷನ ಸಾಮ್ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲುವ ಉಪಾಯವನ್ನು ಹೂಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವುದು ಸಾಲದೆಂದೆಣಿಸಿ, ಇವನು ಯೆಹೂದ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಬಳಗದವರನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅವನು ಮೊರ್ದೆಕೈ ಒಬ್ಬನ ಮೇಲೆ ಕೈಮಾಡುವುದು ಸಾಲದೆಂದೆಣಿಸಿ ಇವನು ಯೆಹೂದ್ಯ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಇವನ ಬಂಧುಬಳಗದವರನ್ನೆಲ್ಲಾ, ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಲು ತೀರ್ಮಾನಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವದು ಸಾಲದೆಂದೆಣಿಸಿ ಇವನು ಯೆಹೂದಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಗಳನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಮೊರ್ದೆಕೈ ಮತ್ತು ಅವನ ಜನರು ಯೆಹೂದ್ಯರೆಂದು ಹಾಮಾನನಿಗೆ ಗೊತ್ತಾದಾಗ ಮೊರ್ದೆಕೈಯನ್ನು ಮಾತ್ರ ಕೊಲ್ಲಬಾರದೆಂದು ಅವನಿಗೆ ತೋರಿತು. ಅದರ ಬದಲು ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನರಾದ ಯೆಹೂದ್ಯರನ್ನೆಲ್ಲಾ ಸಂಹರಿಸಲು ಮಾರ್ಗವನ್ನು ಹುಡುಕಿದನು. ಅಧ್ಯಾಯವನ್ನು ನೋಡಿ |