ಎಸ್ತೇರಳು 2:4 - ಪರಿಶುದ್ದ ಬೈಬಲ್4 ಅನಂತರ ರಾಜನಿಗೆ ಇಷ್ಟವಾದ ಕನ್ನಿಕೆಯನ್ನು ವಷ್ಟಿಯ ಬದಲಾಗಿ ರಾಣಿಯನ್ನಾಗಿ ಮಾಡಲಿ” ಎಂದು ಹೇಳಿದರು. ಅವರ ಸಲಹೆ ರಾಜನಿಗೆ ಸರಿಯೆನಿಸಿದ್ದರಿಂದ ಅವನು ಅದಕ್ಕೆ ಒಪ್ಪಿಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅರಸನು ಯಾವ ಕನ್ಯೆಯನ್ನು ಇಷ್ಟಪಡುವನೋ ಆ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ” ಎಂದು ಹೇಳಿದರು. ಅರಸನು ಅವರ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಯಾವ ಕನ್ಯೆಯು ಅರಸನಿಗೆ ಸುಪ್ರೀತಳಾಗಿ ಕಾಣುವಳೋ ಅವಳು ವಷ್ಟಿರಾಣಿಯ ಬದಲಾಗಿ ಪಟ್ಟದರಸಿಯಾಗಬೇಕು,” ಎಂದು ಹೇಳಿದರು. ಅವರ ಈ ಸಲಹೆ ಅರಸನಿಗೆ ಸೂಕ್ತವೆಂದು ತೋರಿಬರಲು ಅವನು ಅದೇ ಪ್ರಕಾರ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಮತ್ತು ಅರಸನಿಗೆ ಇಷ್ಟಳಾಗಿ ಕಾಣುವ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಎಂದು ಹೇಳಿದರು. ಅರಸನು ಈ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು. ಅಧ್ಯಾಯವನ್ನು ನೋಡಿ |