ಎಫೆಸದವರಿಗೆ 5:14 - ಪರಿಶುದ್ದ ಬೈಬಲ್14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ: “ನಿದ್ರೆಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆದ್ದರಿಂದ, “ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಆಗ ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಆದ್ದರಿಂದ: ನಿದ್ದೆಮಾಡುವವನೇ ಎದ್ದೇಳು ಸತ್ತವರನು ಬಿಟ್ಟು ಬಾ ಎಚ್ಚೆತ್ತು ನನಗೀವನು ಬೆಳಕನು ಕ್ರಿಸ್ತನು.” ಎಂದು ಬರೆಯಲಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆದದರಿಂದ - ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಕ್ರಿಸ್ತನು ನಿನಗೆ ಪ್ರಕಾಶ ಕೊಡುವನು ಎಂದು ಹೇಳಿಯದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಕಶ್ಯಾಕ್ ಮಟ್ಲ್ಯಾರ್, ಹರ್ ಎಕ್ ಚುಕೆಚಿ ಕಾಮಾ ದಾಕ್ವುತಲೊಚ್ ಉಜ್ವೊಡ್, ತೆಚ್ಯಾ ಸಾಟ್ನಿ ಅಸೆ ಸಾಂಗಲ್ಲೆ ಹಾಯ್; “ನಿಜು ಲಾಗಲ್ಯಾ ಮಾನ್ಸಾ ಜಾಗೊ ಹೊ! ಮರಲ್ಯಾಕ್ನಿ ಸೊಡುನ್ ಉಟ್, ಕ್ರಿಸ್ತ್ ತುಜ್ಯಾ ವೈರ್ ಉಜ್ವೊಡ್ ದಿತಾ,” ಅಧ್ಯಾಯವನ್ನು ನೋಡಿ |
ಆದರೆ ಯೆಹೋವನು ಹೇಳುವುದೇನೆಂದರೆ, “ನಿನ್ನ ಜನರು ಸತ್ತಿದ್ದಾರೆ. ಆದರೆ ಅವರು ಮತ್ತೆ ಬದುಕುವರು. ನನ್ನ ಜನರ ದೇಹಗಳು ಸತ್ತವರೊಳಗಿಂದ ಏಳುವವು. ಭೂಮಿಯ ಮೇಲೆ ಸತ್ತಿರುವ ಜನರೇ, ಎದ್ದುನಿಂತು ಸಂತೋಷಿಸಿರಿ. ನಿಮ್ಮನ್ನು ಆವರಿಸಿದ ಮಂಜು ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ. ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”