ಎಫೆಸದವರಿಗೆ 4:22 - ಪರಿಶುದ್ದ ಬೈಬಲ್22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಆದ್ದರಿಂದ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಹಳೆಯ ಸ್ವಭಾವವನ್ನು ಕಿತ್ತೊಗೆಯಿರಿ; ಅದು ಕಾಮಾಭಿಲಾಷೆಯಿಂದ ಕಲುಷಿತವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದಂದರೆ - ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ನಿಮಗೆ ಉಪದೇಶಿಸಿದಂತೆ, ನೀವು ನಿಮ್ಮ ಹಿಂದಿನ ನಡತೆಯ ಪ್ರಕಾರ ಮೋಸಕರವಾದ ಆಶೆಗಳ ಅನುಸಾರವಾಗಿರುವ ಹಳೆಯ ಸ್ವಭಾವವನ್ನು ತೆಗೆದುಹಾಕಬೇಕು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್22 ತಸೆ ಹೊವ್ನ್, ತುಮ್ಕಾ ಶಿಕ್ವಲ್ಲೆ ಕಾಯ್ ಮಟ್ಲ್ಯಾರ್, ತುಮಿ ತುಮ್ಚೆ ಅದ್ಲೊ ಬುರ್ಶೊ ಗುನ್ ಸೊಡುನ್ ದಿವ್ಚೆ ಮನುನ್ ಮಟ್ಲ್ಯಾರ್ ತುಮ್ಚೊ ಜನ್ನೊ ಸ್ವಬಾವ್ ಕಾಡುನ್ ಟಾಕುಚೆ ಮನ್ತಲೆ ಶಿಕುನ್ ಘೆಟ್ಲ್ಯಾಸಿ ಲೊಕಾ ಅಪ್ನಿ ಕರ್ತಲ್ಯಾ ಬುರ್ಶ್ಯಾ ಕಾಮಾಂಚ್ಯಾ ವೈನಾ ಪಸೆತ್ ಪಡಲ್ಯಾ ಸಾಟ್ನಿ ತೊ ಅದ್ಲೊ ಸ್ವಬಾವ್ ದಿಸ್ ಗೆಲೊಸೊ ಹಾಳ್ ಹೊಯ್ತ್ ಜಾತಾ. ಅಧ್ಯಾಯವನ್ನು ನೋಡಿ |
ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು.
ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.
ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು. ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ. ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ.
ಎದೋಮೇ, ನೀನು ಬೇರೆ ಜನಾಂಗಗಳನ್ನು ಹೆದರಿಸಿದೆ. ಆದ್ದರಿಂದ ನೀನು ನಿನ್ನನ್ನೇ ಪ್ರಮುಖನೆಂದು ಭಾವಿಸಿಕೊಂಡೆ. ಆದರೆ ಅದು ನಿನ್ನ ಮೂರ್ಖತನ. ನಿನ್ನ ಅಹಂಭಾವ ನಿನಗೆ ಮೋಸಮಾಡಿದೆ. ಎದೋಮೇ, ನೀನು ಎತ್ತರದ ಬೆಟ್ಟಗಳಲ್ಲಿರುವೆ. ಬೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ. ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆಕಟ್ಟಿದರೂ ನಾನು ನಿನ್ನನ್ನು ಹಿಡಿಯುತ್ತೇನೆ. ಅಲ್ಲಿಂದ ನಿನ್ನನ್ನು ಕೆಳಗೆ ತರುತ್ತೇನೆ.” ಇದು ಯೆಹೋವನ ನುಡಿ.