17 ರಾಜರಾದ ತಾವು ಅಪೇಕ್ಷಿಸಿದರೆ ರಾಜವೃತ್ತಾಂತವನ್ನು ನೀವೇ ಪರಿಶೋಧಿಸಿ. ಜೆರುಸಲೇಮಿನಲ್ಲಿ ಮತ್ತೆ ದೇವಾಲಯವನ್ನು ಕಟ್ಟಲು ರಾಜ ಸೈರಸನು ಆಜ್ಞಾಪಿಸಿದ್ದು ನಿಜವೇ ಎಂಬುದನ್ನು ನೀವೇ ನೋಡಿರಿ. ಆಮೇಲೆ, ಅರಸನೇ, ಇದರ ವಿಚಾರವಾಗಿ ಏನು ತೀರ್ಮಾನ ಮಾಡಿದ್ದೀರೆಂದು ನಮಗೆ ಪತ್ರದ ಮೂಲಕ ತಿಳಿಸಿರಿ.
17 “ಅರಸರಿಗೆ ಸರಿತೋರುವುದಾದರೆ ಯೆರೂಸಲೇಮಿನ ಈ ದೇವಾಲಯವನ್ನು ಪುನಃ ಕಟ್ಟುವುದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ವಿಷಯವಾಗಿ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿ ನೋಡಲಿ ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ” ಎಂದು ಉತ್ತರಕೊಟ್ಟನು.
17 “ಅರಸರಿಗೆ ಸರಿತೋರುವುದಾದರೆ, ಜೆರುಸಲೇಮಿನ ಈ ದೇವಾಲಯವನ್ನು ಮರಳಿ ಕಟ್ಟುವುದಕ್ಕೆ ಅರಸ ಸೈರಸನ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ಬಗ್ಗೆ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿನೋಡಬೇಕು. ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
17 ಅರಸನಿಗೆ ಸರಿತೋಚುವದಾದರೆ ಯೆರೂಸಲೇವಿುನ ಈ ದೇವಾಲಯವನ್ನು ತಿರಿಗಿ ಕಟ್ಟುವದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬದರ ವಿಷಯವಾಗಿ ಬಾಬೆಲಿನ ರಾಜ ಭಂಡಾರದಲ್ಲಿ ಹುಡುಕಿನೋಡಲಿ. ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬದು ನಮಗೆ ತಿಳಿಸೋಣವಾಗಲಿ ಎಂಬದೇ.
17 “ಆದ್ದರಿಂದ ಅರಸನಿಗೆ ಸರಿ ತೋರುವುದಾದರೆ, ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ, ಇಲ್ಲವೋ ಎಂಬುದನ್ನು ಬಾಬಿಲೋನಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
ರಾಜನಾದ ಅರ್ತಷಸ್ತನೇ, ನಿಮಗಿಂತ ಮೊದಲು ಆಳಿದ ರಾಜರ ಬಗ್ಗೆ ಬರೆದ ವೃತ್ತಾಂತವನ್ನು ಓದಿರಿ ಎಂದು ನಿಮ್ಮನ್ನು ವಿನಂತಿಸುತ್ತೇವೆ. ಜೆರುಸಲೇಮ್ ಯಾವಾಗಲೂ ಇತರ ರಾಜರುಗಳಿಗೆ ಎದುರುಬೀಳುವುದನ್ನು ನೀವು ಅದರಲ್ಲಿ ಕಂಡುಕೊಳ್ಳುವಿರಿ. ಬೇರೆ ರಾಜರನ್ನು ಮತ್ತು ದೇಶಗಳವರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದು ಮಾತ್ರವಲ್ಲ, ಪೂರ್ವಕಾಲದಿಂದಲೂ ಈ ನಗರದಿಂದ ಎಷ್ಟೋ ದಂಗೆಗಳು ಎದ್ದಿವೆ. ಆ ಕಾರಣಕ್ಕಾಗಿಯೇ ಜೆರುಸಲೇಮ್ ನಾಶಮಾಡಲ್ಪಟ್ಟಿತ್ತು.
ಹಿಂದಿನ ರಾಜರ ವೃತ್ತಾಂತ ಪುಸ್ತಕಗಳನ್ನು ಶೋಧಿಸಲು ನಾನು ಆಜ್ಞೆ ಕೊಟ್ಟೆನು. ಆ ವೃತ್ತಾಂತಗಳನ್ನು ಓದಿದಾಗ, ರಾಜರ ವಿರುದ್ಧವಾದ ದಂಗೆಯ ದೀರ್ಘ ಇತಿಹಾಸವನ್ನು ಜೆರುಸಲೇಮ್ ಹೊಂದಿರುವುದು ನಮಗೆ ತಿಳಿದು ಬಂತು. ಜೆರುಸಲೇಮಿನಲ್ಲಿ ದಂಗೆ ಮತ್ತು ಪ್ರತಿಭಟನೆ ಆಗಾಗ್ಗೆ ನಡೆದಿದ್ದವು.