Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 4:22 - ಪರಿಶುದ್ದ ಬೈಬಲ್‌

22 ಈ ವಿಷಯದಲ್ಲಿ ನೀವು ಅಜಾಗರೂಕರಾಗಬಾರದೆಂದು ನಿಮ್ಮನ್ನು ಎಚ್ಚರಿಸುತ್ತೇನೆ. ಜೆರುಸಲೇಮಿನ ಕಟ್ಟುವಿಕೆಯು ಮುಂದುವರಿಯಬಾರದು. ಮುಂದುವರಿದರೆ ನನಗೆ ಆ ಪ್ರಾಂತ್ಯದಿಂದ ದೊರಕಬೇಕಾದ ಹಣವು ದೊರಕುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದಿರಿ, ಉದಾಸೀನತೆಯಿಂದ ಲಕ್ಷಿಸದೆ ಇರಬೇಡಿ” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದಿರಿ, ಆಲಸ್ಯಮಾಡಬೇಡಿರಿ ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 4:22
7 ತಿಳಿವುಗಳ ಹೋಲಿಕೆ  

ಅದೇ ಸಮಯದಲ್ಲಿ ರಾಜರೇ, ನೀವು ತಿಳಿಯಬೇಕಾದ ವಿಷಯವೇನೆಂದರೆ, ಜೆರುಸಲೇಮ್ ಮತ್ತು ಅದರ ಪೌಳಿಗೋಡೆಗಳು ಕಟ್ಟಲ್ಪಟ್ಟಲ್ಲಿ ಅಲ್ಲಿಯ ಪ್ರಜೆಗಳು ತೆರಿಗೆ ಕೊಡುವುದನ್ನು ನಿಲ್ಲಿಸುವರು. ನಿನಗೆ ಕಪ್ಪಕಾಣಿಕೆ ಸಲ್ಲಿಸುವುದನ್ನೂ ಇತರ ತೆರಿಗೆಗಳನ್ನು ಕೊಡುವುದನ್ನೂ ನಿಲ್ಲಿಸುವರು. ಇದರಿಂದಾಗಿ ರಾಜರಿಗೆ ದೊಡ್ಡ ನಷ್ಟವಾಗಲಿದೆ.


ಈಗ ನೀವು ಜೆರುಸಲೇಮ್‌ನಲ್ಲಿ ನಡೆಯುವ ಕೆಲಸವನ್ನು ನಿಲ್ಲಿಸುವಂತೆ ಆಜ್ಞಾಪಿಸಬೇಕು. ನಾನು ತಿಳಿಸುವ ತನಕ ಅದು ತಿರಿಗಿ ಕಟ್ಟಲ್ಪಡಬಾರದು.


ರಾಜನಾದ ಅರ್ತಷಸ್ತನು ಬರೆದ ಪತ್ರವನ್ನು ರೆಹೂಮನಿಗೂ ಕಾರ್ಯದರ್ಶಿ ಶಿಂಷೈಗೂ ಅವರೊಂದಿಗಿದ್ದ ಜನರ ಮುಂದೆ ಓದಲಾಯಿತು. ಆ ಕೂಡಲೇ ಅವರು ಬೇಗನೆ ಜೆರುಸಲೇಮಿನಲ್ಲಿದ್ದ ಯೆಹೂದ್ಯರ ಬಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ಬಲವಂತದಿಂದ ನಿಲ್ಲಿಸಿದರು.


ಆ ನೂರಿಪ್ಪತ್ತು ಜನರ ಮೇಲೆ ಮೂರು ಜನ ಮುಖ್ಯಾಧಿಕಾರಿಗಳನ್ನು ನೇಮಿಸಿದನು. ದಾನಿಯೇಲನು ಈ ಮೂರು ಜನ ಮುಖ್ಯಾಧಿಕಾರಿಗಳಲ್ಲೊಬ್ಬನಾಗಿದ್ದನು. ಯಾರೊಬ್ಬರೂ ತನಗೆ ಮೋಸ ಮಾಡದಂತೆ ಮತ್ತು ತನ್ನ ರಾಜ್ಯಕ್ಕೆ ನಷ್ಟವಾಗದಂತೆ ನೋಡಿಕೊಳ್ಳಲು ರಾಜನು ಈ ಮೂವರನ್ನು ನೇಮಿಸಿದ್ದನು.


ದಾನಿಯೇಲನು ಬೇರೆ ಮುಖ್ಯಾಧಿಕಾರಿಗಳಿಗಿಂತ ಸಮರ್ಥನೆಂದು ತೋರಿಸಿಕೊಟ್ಟನು. ದಾನಿಯೇಲನು ತನ್ನ ಒಳ್ಳೆಯ ಗುಣ ಮತ್ತು ಮಹಾ ಸಾಮರ್ಥ್ಯಗಳ ಮೂಲಕ ಈ ಒಳ್ಳೆಯ ಹೆಸರನ್ನು ಪಡೆದನು. ದಾನಿಯೇಲನಿಂದ ಅರಸನು ತುಂಬ ಪ್ರಭಾವಿತನಾಗಿ ಅವನನ್ನು ಇಡೀ ರಾಜ್ಯದ ಅಧಿಕಾರಿಯನ್ನಾಗಿ ನೇಮಿಸಲು ಯೋಜನೆ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು