Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 2:69 - ಪರಿಶುದ್ದ ಬೈಬಲ್‌

69 ದೇವಾಲಯ ಕಟ್ಟಲು ಅವರು ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಕೊಟ್ಟರು. ಒಟ್ಟು ಐನೂರು ಕಿಲೋಗ್ರಾಂ ಬಂಗಾರ, ಮೂರು ಸಾವಿರ ಕಿಲೋಗ್ರಾಂ ಬೆಳ್ಳಿ, ನೂರು ಯಾಜಕರು ಧರಿಸಬೇಕಾದ ಬಟ್ಟೆಗಳನ್ನು ದಾನ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

69 ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

69 ಅವರು ತಮ್ಮ ಸಾಮರ್ಥ್ಯಾನುಸಾರ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - 400 ಕಿಲೋಗ್ರಾಂ ಬೆಳ್ಳಿ ಮತ್ತು ನೂರು ಯಾಜಕ ವಸ್ತ್ರಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

69 ಅವರು ತಮ್ಮ ಸಾಮರ್ಥ್ಯಾನುಸಾರ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲೆ ಬೆಳ್ಳಿ, ನೂರು ಯಾಜಕವಸ್ತ್ರಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

69 ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 2:69
7 ತಿಳಿವುಗಳ ಹೋಲಿಕೆ  

“ಸೊಲೊಮೋನನೇ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಮೂರು ಸಾವಿರದ ಏಳುನೂರೈವತ್ತು ಟನ್ ಬಂಗಾರ, ಮೂವತ್ತೇಳು ಸಾವಿರದ ಐನೂರು ಟನ್ ಬೆಳ್ಳಿ ಮತ್ತು ತೂಕ ಮಾಡಲಾಗದಷ್ಟು ತಾಮ್ರ ಮತ್ತು ಕಬ್ಬಿಣವನ್ನು ಕೂಡಿಸಿಟ್ಟಿದ್ದೇನೆ. ಅಲ್ಲದೆ ಮರಗಳನ್ನು ಮತ್ತು ಕಲ್ಲುಗಳನ್ನು ಕೊಟ್ಟಿರುತ್ತೇನೆ. ಸೊಲೊಮೋನನೇ, ನೀನು ಇವುಗಳಿಗೆ ಇನ್ನೂ ಕೂಡಿಸು.


ಯೆಹೋವನ ದೇವಾಲಯಕ್ಕಾಗಿ ರಾಜನಾದ ಸೊಲೊಮೋನನು ಮಾಡಬೇಕೆಂದಿದ್ದ ಕಾರ್ಯವನ್ನು ಮುಗಿಸಿದನು. ಈ ವಿಶೇಷ ಕಾರ್ಯಕ್ಕಾಗಿ ತನ್ನ ತಂದೆಯಾದ ದಾವೀದನು ಮೀಸಲಾಗಿಟ್ಟಿದ್ದ ವಸ್ತುಗಳನ್ನೆಲ್ಲ ರಾಜನಾದ ಸೊಲೊಮೋನನು ಪಡೆದುಕೊಂಡು ದೇವಾಲಯದೊಳಕ್ಕೆ ತಂದನು. ಅವನು ಬೆಳ್ಳಿಬಂಗಾರಗಳನ್ನು ಯೆಹೋವನ ದೇವಾಲಯದ ಭಂಡಾರಕ್ಕೆ ಸೇರಿಸಿದನು.


ದೇವಾಲಯಕ್ಕಾಗಿ ಅವರು ಒಟ್ಟು ನೂರತೊಂಭತ್ತು ಟನ್ ತೂಕದ ಬಂಗಾರ, ಮುನ್ನೂರ ಎಪ್ಪತ್ತೈದು ಟನ್ ತೂಕದ ಬೆಳ್ಳಿ, ಆರನೂರ ಎಪ್ಪತ್ತೈದು ಟನ್ ತೂಕದ ತಾಮ್ರ ಮತ್ತು ಮೂರು ಸಾವಿರದ ಏಳುನೂರೈವತ್ತು ಟನ್ ತೂಕದ ಕಬ್ಬಿಣವನ್ನು ಕೊಟ್ಟರು.


ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು