ಎಜ್ರ 2:68 - ಪರಿಶುದ್ದ ಬೈಬಲ್68 ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201968 ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)68 ಗೋತ್ರಪ್ರಧಾನರಲ್ಲಿ ಕೆಲವರು ಜೆರುಸಲೇಮಿನಲ್ಲಿ ಸರ್ವೇಶ್ವರನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದೇ ಸ್ಥಳದಲ್ಲಿ ಕಟ್ಟುವುದಕ್ಕೆ ಕಾಣಿಕೆಗಳನ್ನು ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)68 ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇವಿುನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ತಿರಿಗಿ ಅದರ ಸ್ಥಳದಲ್ಲಿ ಕಟ್ಟುವದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ68 ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. ಅಧ್ಯಾಯವನ್ನು ನೋಡಿ |
ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.