ಇಬ್ರಿಯರಿಗೆ 7:1 - ಪರಿಶುದ್ದ ಬೈಬಲ್1 ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಈ ಮೆಲ್ಕಿಜೆದೇಕನು ಸಾಲೇವಿುನ ಅರಸನೂ ಪರಾತ್ಪರನಾದ ದೇವರ ಯಾಜಕನೂ ಆಗಿದ್ದನು; ರಾಜರನ್ನು ಹೊಡೆದು ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. ರಾಜರನ್ನು ಸೋಲಿಸಿ, ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಹ್ಯೊ ಮೆಲ್ಕಿಜೆದೆಕ್ ಸಾಲೆಮಾಚೊ ರಾಜಾ, ಅನಿ ಪವಿತ್ರ್ ದೆವಾಚೊ ಯಜ್ನ್ ಕರ್‍ತಲೊ ಹೊವ್ನ್ ಹೊತ್ತೊ, ರಾಜಾಕ್ನಿ ಹರ್‍ವುನ್ ಪರ್ತುನ್ ಯೆವ್‌ಲಾಗಲ್ಲ್ಯಾ ಅಬ್ರಾಹಾಮಾಕ್ ಗಾವ್ನ್ ಆಶಿರ್ವಾದ್ ದಿಲ್ಯಾನ್. ಅಧ್ಯಾಯವನ್ನು ನೋಡಿ |
ಅನಂತರ ನೆಬೂಕದ್ನೆಚ್ಚರನನ್ನು ಜನರ ಮಧ್ಯದಿಂದ ಓಡಿಸಲಾಯಿತು. ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು. ಅವನು ಕಾಡುಕತ್ತೆಗಳ ಜೊತೆ ವಾಸಿಸಿದನು; ಹಸುಗಳಂತೆ ಹುಲ್ಲು ತಿಂದನು; ಮಂಜಿನಲ್ಲಿ ನೆನೆದನು. ಅವನಿಗೆ ಸರಿಯಾದ ಬುದ್ಧಿ ಬರುವತನಕ ಅವನು ಆ ಸ್ಥಿತಿಯಲ್ಲಿದ್ದನು. ಆಗ ಅವನು ಮಹೋನ್ನತನಾದ ದೇವರೇ ಮಾನವರ ಸಾಮ್ರಾಜ್ಯವನ್ನು ಆಳುತ್ತಾನೆ ಮತ್ತು ಆ ಸಾಮ್ರಾಜ್ಯಕ್ಕೆ ತನಗೆ ಬೇಕಾದವರನ್ನು ಅರಸರನ್ನಾಗಿ ನೇಮಿಸುತ್ತಾನೆ ಎಂಬುದನ್ನು ತಿಳಿದುಕೊಂಡನು.