ಆಮೋಸ 9:5 - ಪರಿಶುದ್ದ ಬೈಬಲ್5 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಭೂಮಿಯನ್ನು ಸ್ಪರ್ಶಿಸುವನು. ಆಗ ಅದು ಕರಗಿಹೋಗುವುದು. ದೇಶದಲ್ಲಿ ವಾಸಿಸುವ ಜನರೆಲ್ಲಾ ಸತ್ತುಹೋದವರಿಗಾಗಿ ಗೋಳಾಡುವರು. ಈಜಿಪ್ಟಿನ ನೈಲ್ ನದಿಯಂತೆ ದೇಶದಲ್ಲಿ ಏರಿಳಿತ ಉಂಟಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಸೇನಾಧೀಶ್ವರನಾದ ಯೆಹೋವನು ಭೂಮಿಯನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುತ್ತದೆ; ಸಕಲ ನಿವಾಸಿಗಳು ಗೋಳಾಡುತ್ತಾರೆ; ನೆಲವೆಲ್ಲಾ ನೈಲ್ ನದಿಯಂತೆ ಉಬ್ಬಿ, ಐಗುಪ್ತದ ನದಿಯ ಹಾಗೆಯೇ ಇಳಿದು ಹೋಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಸೇನಾಧಿಶ್ವರ ದೇವರಾದ ಸರ್ವೇಶ್ವರ ಮುಟ್ಟಿದ ಮಾತ್ರಕ್ಕೆ ಕರಗುವುದು ಭೂಮಿ. ಗೋಳಿಡುವುದು ಸಕಲ ಜನತೆ ಉಬ್ಬುವುದು ನಾಡೆಲ್ಲ ನೈಲ್ ನದಿಯಂತೆ ಕುಗ್ಗಿ ಕರಗುವುದು ಈಜಿಪ್ಟಿನ ನದಿಯಂತೆ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆಹಾ, ಸೇನಾಧೀಶ್ವರದೇವರಾದ ಕರ್ತನು ಭೂವಿುಯನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿಹೋಗುತ್ತದೆ, ಸಕಲ ನಿವಾಸಿಗಳು ಗೋಳಾಡುತ್ತಾರೆ; ನೆಲವೆಲ್ಲಾ ನೈಲ್ ನದಿಯಂತೆ ಉಬ್ಬಿ ಐಗುಪ್ತದ ನದಿಯ ಹಾಗೆಯೇ ಇಳಿದುಹೋಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಸೇನಾಧೀಶ್ವರ ಯೆಹೋವ ದೇವರಾದ ಕರ್ತರೇ, ನೀವು ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವುದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನೈಲ್ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಈಜಿಪ್ಟಿನ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವುದು. ಅಧ್ಯಾಯವನ್ನು ನೋಡಿ |