12 ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ! ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ! ಆದರೆ ನೀವು ಎಲ್ಲವನ್ನು ತಿರುವುಮುರುವು ಮಾಡುತ್ತೀರಿ. ಒಳ್ಳೆಯತನವನ್ನು ನೀವು ವಿಷವಾಗಿ ಮಾಡಿದ್ದೀರಿ. ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
ನೀನು ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಬೇಕು. ದೇವರು ನಕ್ಷತ್ರಪುಂಜಗಳನ್ನು ನಿರ್ಮಿಸಿದ್ದಾನೆ. ಆತನು ಕತ್ತಲೆಯನ್ನು ಮುಂಜಾನೆಯ ಬೆಳಕನ್ನಾಗಿ ಮಾಡುತ್ತಾನೆ. ಹಗಲನ್ನು ಕಾರ್ಗತ್ತಲೆಯನ್ನಾಗಿ ಮಾರ್ಪಡಿಸುತ್ತಾನೆ. ಆತನು ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಹೊಯ್ಯುತ್ತಾನೆ. ಆತನ ಹೆಸರು ಯೆಹೋವನು. ಆತನು ಒಂದು ಬಲವಾದ ನಗರವನ್ನು ರಕ್ಷಿಸಿ ಇನ್ನೊಂದನ್ನು ನಾಶನಕ್ಕೆ ಒಪ್ಪಿಸುತ್ತಾನೆ.” ನೀನು ಒಳ್ಳೆಯತನವನ್ನು ವಿಷಕಾರಿಯನ್ನಾಗಿ ಮಾಡಿದಿ. ನ್ಯಾಯವನ್ನು ಕೊಲೆಮಾಡಿದಿ. ಅದು ನೆಲದ ಮೇಲೆ ಬೀಳುವಂತೆ ಮಾಡಿದಿ.
ಅವರು ವಾಗ್ದಾನ ಮಾಡುತ್ತಾರೆ. ಆದರೆ ಅದು ಕೇವಲ ಸುಳ್ಳು, ಅವರು ಕೊಟ್ಟ ಮಾತನ್ನು ನಡಿಸುವದಿಲ್ಲ. ಬೇರೆ ದೇಶಗಳವರೊಂದಿಗೆ ಅವರು ಒಪ್ಪಂದ ಮಾಡುತ್ತಾರೆ. ದೇವರು ಆ ಒಪ್ಪಂದವನ್ನು ಒಪ್ಪುವುದಿಲ್ಲ. ಅವರ ನ್ಯಾಯಾಧೀಶರು ಉತ್ತ ಹೊಲದಲ್ಲಿ ಬೆಳೆಯುವ ವಿಷದ ಹಣಜಿಯಂತಿದ್ದಾರೆ.
ಕೆಟ್ಟದ್ದನ್ನು ಎರಡೂ ಕೈಗಳಿಂದ ಮಾಡಲು ಜನರು ನಿಪುಣರಾಗಿದ್ದಾರೆ. ಅಧಿಕಾರಿಗಳು ಲಂಚ ಕೇಳುತ್ತಾರೆ. ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಾರೆ. “ಪ್ರಮುಖ ನಾಯಕರು” ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ. ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ.
ಯೆಹೋವನೇ, ನೀನು ನಂಬಿಗಸ್ತರಾದ ಜನರನ್ನು ಹುಡುಕುವೆ. ನೀನು ಯೆಹೂದದ ಜನರಿಗೆ ಹೊಡೆದೆ, ಆದರೆ ಅವರಿಗೆ ಅದರಿಂದ ನೋವಾಗಲಿಲ್ಲ. ನೀನು ಅವರನ್ನು ಹಾಳುಮಾಡಿದೆ, ಆದರೆ ಅದರಿಂದ ಅವರು ಪಾಠವನ್ನೂ ಕಲಿಯಲಿಲ್ಲ. ಅವರು ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ. ಅವರು ಬಹಳ ಹಟಮಾರಿಗಳಾದರು.