ಆಮೋಸ 5:20 - ಪರಿಶುದ್ದ ಬೈಬಲ್20 ಯೆಹೋವನ ನ್ಯಾಯತೀರ್ಪಿನ ದಿವಸವು ಬೆಳಕಿನ ದಿವಸವಾಗಿರದೆ ಕತ್ತಲೆಯ ದಿವಸವಾಗಿರುವುದು; ಬೆಳಕಿನ ಮಿಣಕೂ ಇಲ್ಲದ ಅಂಧಕಾರದ ದಿನವಾಗಿರುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ! ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಖಂಡಿತವಾಗಿ ಸ್ವಾಮಿಯ ದಿನ ಬೆಳಕಾಗಿರದು, ಕತ್ತಲೆಯಾಗಿರುತ್ತದೆ, ಒಂದು ಚುಕ್ಕೆಯೂ ಇಲ್ಲದ ಕಾರಿರುಳಂತಿರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಯೆಹೋವನ ದಿನವು ಕತ್ತಲೆಯೇ ಸರಿ, ಬೆಳಕಲ್ಲವಲ್ಲಾ; ಹೌದು, ಯಾವ ವಿುಣುಕೂ ಇಲ್ಲದ ಗಾಢಾಂಧಕಾರವೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಹೀಗೆ ಯೆಹೋವ ದೇವರ ದಿವಸವು ಬೆಳಕಲ್ಲ, ಕತ್ತಲೆಯೇ. ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲೆಯೇ. ಅಧ್ಯಾಯವನ್ನು ನೋಡಿ |