ಆಮೋಸ 5:16 - ಪರಿಶುದ್ದ ಬೈಬಲ್16 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು. ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು. ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು. ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಸೇನಾಧೀಶ್ವರ ದೇವರಾದ, ಯೆಹೋವನು ಇಂತೆನ್ನುತ್ತಾನೆ: “ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು ಮತ್ತು ಸಕಲ ಬೀದಿಗಳಲ್ಲಿ, ‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು. ರೈತರನ್ನು ಪ್ರಲಾಪಿಸುವುದಕ್ಕೂ ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬೀದಿ ಚೌಕಗಳಲ್ಲೆಲ್ಲ ಗೋಳಾಟ ಇರುವುದು. ಹಾದಿಬೀದಿಗಳಲ್ಲೆಲ್ಲ ‘ಅಯ್ಯಯ್ಯೋ’ ಎಂದು ಜನರು ಪ್ರಲಾಪಿಸುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು ಗೋಳಾಡುವುದಕ್ಕೂ ಕರೆಯಲಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಸೇನಾಧೀಶ್ವರದೇವರಾದ ಯೆಹೋವಕರ್ತನು ಇಂತೆನ್ನುತ್ತಾನೆ - ಎಲ್ಲಾ ಚೌಕಗಳಲ್ಲಿ ಕಿರಿಚಾಟವಾಗುವದು, ಸಕಲ ಬೀದಿಗಳಲ್ಲಿ ಅಯ್ಯಯ್ಯೋ ಎಂದು ಅರಚಿಕೊಳ್ಳುವರು; ರೈತರನ್ನು ಪ್ರಲಾಪಿಸುವದಕ್ಕೂ ಗೋಳಾಟದವರನ್ನು ಗೋಳಿಡುವದಕ್ಕೂ ಕರೆಯುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, ಗೋಳಾಡುವುದಕ್ಕೂ ಕರೆಯಲಾಗುವುದು. ಅಧ್ಯಾಯವನ್ನು ನೋಡಿ |