Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:1 - ಪರಿಶುದ್ದ ಬೈಬಲ್‌

1 ಇಸ್ರೇಲಿನ ಜನರೇ, ಈ ಹಾಡನ್ನು ಕೇಳಿರಿ. ಇದು ನಿಮ್ಮ ಮರಣದ ಗೀತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಹಾಡುವ ಈ ಮಾತನ್ನು ಕೇಳಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯನ್ನು ಕೇಳಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಎತ್ತುವ ಈ ಮಾತನ್ನು ಕೇಳಿರಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯ ವಾಕ್ಯವನ್ನು ಕೇಳಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:1
19 ತಿಳಿವುಗಳ ಹೋಲಿಕೆ  

ದೇವರು ನನಗೆ, “ಇಸ್ರೇಲರ ಅಧಿಪತಿಗಳ ವಿಷಯವಾದ ಈ ಶೋಕಗೀತೆಯನ್ನು ನೀನು ಹಾಡಬೇಕು” ಎಂದು ಹೇಳಿದನು:


ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ: “ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ, ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.


ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು; ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು. ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ. ಯಾರೂ ಅಲ್ಲಿ ತಿರುಗಾಡುವದಿಲ್ಲ. ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ. ಪಕ್ಷಿಗಳು ಹಾರಿಹೋಗಿವೆ; ಪ್ರಾಣಿಗಳು ಓಡಿಹೋಗಿವೆ.


“ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು.


ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು. ಜನರು ಶೋಕಗೀತೆಯನ್ನು ಹಾಡುವರು. ‘ನಾವು ನಾಶವಾದೆವು! ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು. ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು, ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು.


ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು. ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು. ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು. ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.


ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.


ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ.


“ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.


“ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: “‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ. ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ. ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ. ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ. ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”


“ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ. ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.


“ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು.


ಅವರು ನಿನ್ನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು: “‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ. ನಿನ್ನಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಬಂದರು. ನೀನು ಪ್ರಸಿದ್ಧಳಾಗಿದ್ದೆ, ಆದರೆ ನೀನೀಗ ಹೋಗಿಬಿಟ್ಟೆ. ದ್ವೀಪವಾಗಿರುವ ನೀನು ಮತ್ತು ನಿನ್ನಲ್ಲಿ ವಾಸವಾಗಿದ್ದ ಜನರು ಸಮುದ್ರದಿಂದ ದೂರದಲ್ಲಿರುವುದರಿಂದ ಬಲಿಷ್ಠರಾಗಿದ್ದೀರಿ. ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನ್ನು ನೀವು ಭಯಗೊಳಿಸಿದಿರಿ.


ಅದರ ಸ್ವಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು. ಈಗ ಬಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಬಳಸಲಾಗುತ್ತಿದೆ.”


ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ. ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ. ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ. ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.


ಹೀಗಿರಲು ನಾನು ಯೆಹೂದದ ಜನರನ್ನು ಶಿಕ್ಷಿಸಬಾರದೇ?” ಇದು ದೇವರಿಂದ ಬಂದ ಮಾತು. “ಅಂಥಾ ಜನರನ್ನು ನಾನು ಶಿಕ್ಷಿಸಬೇಕೆಂಬುದು ನಿನಗೆ ಗೊತ್ತು. ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.”


ಯೆಹೋವನು ಹೇಳುವದನ್ನು ಆಲಿಸಿರಿ: “ಬೇರೆ ಜನಾಂಗದ ಜನರಿಗೆ ಈ ಪ್ರಶ್ನೆಯನ್ನು ಕೇಳಿರಿ, ‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನ್ನು ಬೇರೆ ಯಾರಾದರೂ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?’ ಇಸ್ರೇಲ್ ದೇಶವು ದೇವರ ವಧುವಿನಂತಿದೆ.


ಆ ಜನರು ಸಮಾರ್ಯದ ಪಾಪದ ಮೇಲೆ ಆಣೆಯಿಡುವರು, ‘ದಾನೇ, ನಿನ್ನ ದೇವರಾಣೆ ….’ ‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು. ಆದರೆ ಆ ಜನರು ಬಿದ್ದುಹೋಗುವರು. ಅಲ್ಲಿಂದ ತಿರುಗಿ ಏಳುವದೇ ಇಲ್ಲ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು