ಆಮೋಸ 2:9 - ಪರಿಶುದ್ದ ಬೈಬಲ್9 “ಆದರೆ ಅವರ ಎದುರಿನಲ್ಲಿ ಅಮೋರಿಯರನ್ನು ನಾಶಮಾಡಿದವನು ನಾನೇ, ಅಮೋರಿಯರು ದೇವದಾರು ಮರಗಳಂತೆ ಎತ್ತರವೂ, ಅಲ್ಲೊನ್ ಮರಗಳಂತೆ ಬಲಶಾಲಿಗಳೂ ಆಗಿದ್ದರು. ಆದರೆ ನಾನು ಕೆಳಗಿನಿಂದ ಅವರ ಬೇರನ್ನೂ ಮೇಲಿನಿಂದ ಅವರ ಫಲಗಳನ್ನೂ ನಾಶಮಾಡಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು, ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ, ಅಲ್ಲೋನ್ ಮರದ ಹಾಗೆ ಬಲಿಷ್ಠವಾಗಿಯೂ ಇದ್ದರು. ಆದರೂ ಮರದ ಮೇಲಿನ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು; ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ ಅಲ್ಲೋನ್ ಮರದ ಹಾಗೆ ದೃಢವಾಗಿ ಇದ್ದರೂ ಮೇಲೆ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 “ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, ಅಮೋರಿಯರನ್ನು ನಾನು ನಾಶ ಪಡಿಸಿದೆನು. ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, ಅವರನ್ನು ನಿರ್ಮೂಲ ಮಾಡುವೆನು. ಅಧ್ಯಾಯವನ್ನು ನೋಡಿ |
ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ದ್ರಾಕ್ಷಾಲತೆಯು ಬದುಕಿ ಬೆಳೆಯುವುದೋ? ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ, ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು. ಆಗ ಚಿಗುರುಗಳು ಬಾಡಿ ಒಣಗಿಹೋಗುವವು. ಆ ಸಸಿಯು ಬಲಹೀನವಾಗುವುದು. ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.
ಚೈತನ್ಯಸ್ವರೂಪನಾದ ದೇವರು ನಿಜವಾಗಿಯೂ ನಿಮ್ಮ ಸಂಗಡ ಇದ್ದಾನೆ ಎಂಬುದಕ್ಕೆ ಇಲ್ಲಿ ಒಂದು ಸಾಕ್ಷಿ ಇದೆ. ಆತನು ನಿಜವಾಗಿಯೂ ನಿಮ್ಮ ವೈರಿಗಳನ್ನು ಸೋಲಿಸುತ್ತಾನೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ. ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು, ಇವರನ್ನೆಲ್ಲಾ ಆತನು ಸೋಲಿಸುತ್ತಾನೆ. ಆ ದೇಶದಿಂದ ಅವರನ್ನು ಬಲವಂತವಾಗಿ ಹೊರಗಟ್ಟುತ್ತಾನೆ.
ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು. ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ.