ಆದಿಕಾಂಡ 47:13 - ಪರಿಶುದ್ದ ಬೈಬಲ್13 ಬರಗಾಲವು ಹೆಚ್ಚು ಭೀಕರವಾಯಿತು. ದೇಶದಲ್ಲಿ ಎಲ್ಲಿಯೂ ಆಹಾರ ಇರಲಿಲ್ಲ. ಈಜಿಪ್ಟ್ ಮತ್ತು ಕಾನಾನ್ ದೇಶಗಳು ಬರಗಾಲದಿಂದ ಬಡದೇಶಗಳಾದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಬರವು ಬಹು ಘೋರವಾಗಿದ್ದುದರಿಂದ ದೇಶದ ಯಾವ ಭಾಗದಲ್ಲಿಯೂ ಆಹಾರ ಸಿಕ್ಕುತ್ತಿರಲಿಲ್ಲ. ಆ ಬರದ ನಿಮಿತ್ತ ಐಗುಪ್ತ ದೇಶವು ಹಾಗೂ ಕಾನಾನ್ ದೇಶವು ಕ್ಷಾಮದಿಂದ ಬರಡಾದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಬರವು ಬಹು ಘೋರವಾಗಿತ್ತು. ದೇಶದ ಯಾವ ಭಾಗದಲ್ಲೂ ಆಹಾರ ಸಿಕ್ಕುತ್ತಿರಲಿಲ್ಲ. ಈ ನಿಮಿತ್ತ ಈಜಿಪ್ಟ್ ದೇಶವೂ ಕಾನಾನ್ ನಾಡೂ ಹಾಗೆ ಸೊರಗಿಹೋಗುತ್ತಿದ್ದುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಬರವು ಬಹು ಘೋರವಾಗಿದ್ದದರಿಂದ ದೇಶದ ಯಾವ ಭಾಗದಲ್ಲಿಯೂ ಆಹಾರ ಸಿಕ್ಕುತ್ತಿರಲಿಲ್ಲ. ಆ ಬರದ ನಿವಿುತ್ತ ಐಗುಪ್ತದೇಶದವರಿಗೂ ಕಾನಾನ್‍ದೇಶದವರಿಗೂ ದಿಕ್ಕುತೋರದೆ ಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆದರೆ ಬರವು ಅತಿ ಘೋರವಾಗಿದ್ದದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಈಜಿಪ್ಟ್ ದೇಶವೂ, ಕಾನಾನ್ ದೇಶವೂ ಕ್ಷಾಮದಿಂದ ಕ್ಷೀಣವಾದವು. ಅಧ್ಯಾಯವನ್ನು ನೋಡಿ |