Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 46:12 - ಪರಿಶುದ್ದ ಬೈಬಲ್‌

12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್ ಮತ್ತು ಜೆರಹ. (ಏರ್ ಮತ್ತು ಓನಾನ್ ಕಾನಾನಿನಲ್ಲಿ ಇರುವಾಗಲೇ ಸತ್ತುಹೋದರು.) ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್, ಜೆರಹ. ಇವರಲ್ಲಿ ಏರ್, ಓನಾನ್ ಎಂಬವರು ಕಾನಾನ್ ದೇಶದಲ್ಲೇ ಸತ್ತು ಹೋಗಿದ್ದರು. ಪೆರೆಚನ ಮಕ್ಕಳು: ಹೆಚ್ರೋನ್, ಹಾಮೂಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಯೆಹೂದನ ಮಕ್ಕಳು - ಏರ್, ಓನಾನ್, ಶೆಲಾಹ, ಪೆರೆಜ್ ಮತ್ತು ಜೆರಹ (ಇವರಲ್ಲಿ ಏರ್ ಹಾಗೂ ಓನಾನ್ ಕಾನಾನ್ ನಾಡಿನಲ್ಲೇ ಕಾಲವಾಗಿದ್ದರು). ಪೆರೆಚನ ಮಕ್ಕಳು - ಹೆಚ್ರೋನ್ ಮತ್ತು ಹಾಮೂಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯೆಹೂದನ ಮಕ್ಕಳಾದ ಏರ್ ಓನಾನ್ ಶೇಲಾಹ ಪೆರೆಚ್‍ಜೆರಹ (ಇವರಲ್ಲಿ ಏರ್ ಓನಾನ್ ಎಂಬವರು ಕಾನಾನ್ ದೇಶದಲ್ಲೇ ಸತ್ತರು);

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 46:12
29 ತಿಳಿವುಗಳ ಹೋಲಿಕೆ  

ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು.


ಇದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದರಿಂದ ಆತನು ಓನಾನನನ್ನು ಸಹ ಸಾಯಿಸಿದನು.


ಆದರೆ ಏರನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು.


ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.


ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಕ್ರಿಸ್ತ) ಜಯಗಳಿಸಿದನು. ಆತನು ದಾವೀದನ ಸಂತತಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದಾನೆ” ಎಂದು ಹೇಳಿದನು.


ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.


ಆತನು ಯೆಹೂದಕುಲವನ್ನೇ ಆರಿಸಿಕೊಂಡನು. ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.


ದಾವೀದನ ಕೆಲವು ಗಂಡುಮಕ್ಕಳು ಹೆಬ್ರೋನಿನಲ್ಲಿ ಹುಟ್ಟಿದರು. ದಾವೀದನ ಗಂಡುಮಕ್ಕಳು ಯಾರೆಂದರೆ: ಅಮ್ನೋನನು ದಾವೀದನ ಚೊಚ್ಚಲಮಗನು. ಅವನ ತಾಯಿ ಅಹೀನೋವಮಳು. ಈಕೆಯು ಇಜ್ರೇಲಿನವಳು. ಎರಡನೆಯ ಮಗನು ಕರ್ಮೇಲ್ಯಳಾದ ಅಬೀಗೈಲಳ ಮಗನಾದ ದಾನಿಯೇಲನು.


ಇಸ್ರೇಲನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,


ಯೆಹೋವನು ಇಸ್ರೇಲರಿಗೆ, “ಯೆಹೂದ ಕುಲದವರು ಹೋಗಲಿ. ಅವರು ಈ ದೇಶವನ್ನು ವಶಪಡಿಸಿಕೊಳ್ಳುವಂತೆ ನಾನು ಮಾಡುತ್ತೇನೆ” ಎಂದು ಹೇಳಿದನು.


ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು. ಅವನನ್ನು ಬಲಗೊಳಿಸಿ ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.”


ಯೆಹೂದ ಕುಲದಿಂದ ಅಮ್ಮೀನಾದಾಬನ ಮಗನಾದ ನಹಶೋನ್;


ಬಳಿಕ ಆಕೆ ಮತ್ತೊಬ್ಬ ಮಗನಿಗೆ ಜನನವಿತ್ತಳು. ಅವರು ಆ ಮಗನಿಗೆ ಓನಾನ ಎಂದು ಹೆಸರಿಟ್ಟರು.


ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.


ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್.


ತಾಮಾರಳು ಯೆಹೂದನ ಮಗನಾದ ಪೆರೆಚನಿಗೆ ಜನ್ಮಕೊಟ್ಟಳು. ಅದರಿಂದ ಅವನ ಕುಟುಂಬವು ಅಭಿವೃದ್ಧಿ ಹೊಂದಿತು. ಹಾಗೆಯೇ ರೂತಳಿಂದ ಯೆಹೋವನು ನಿನಗೆ ಹಲವಾರು ಮಕ್ಕಳನ್ನು ಕೊಡಲಿ; ಅವನಂತೆಯೇ ನಿನ್ನ ಕುಟುಂಬವೂ ಅಭಿವೃದ್ಧಿ ಹೊಂದಲಿ” ಎಂದು ಆಶೀರ್ವದಿಸಿದರು.


ಊತ್ಯೆ ಅಮ್ಮೀಹೂದನ ಮಗ, ಅಮ್ಮೀಹೂದನು ಒಮ್ರಿಯ ಮಗ, ಒಮ್ರಿಯು ಇಮ್ರಿಯ ಮಗ, ಇಮ್ರಿಯು ಬಾನೀಯ ಮಗ, ಬಾನೀಯು ಪೆರೆಚನ ಸಂತತಿಯವನು, ಪೆರೆಚನು ಯೆಹೂದನ ಮಗ.


ಆಕೆಗೆ ಮೂರನೆಯ ಮಗನು ಹುಟ್ಟಿದಾಗ ಆಕೆ ಅದಕ್ಕೆ ಶೇಲಹ ಎಂದು ಹೆಸರಿಟ್ಟಳು. ಆ ಮಗು ಹುಟ್ಟಿದಾಗ ಯೆಹೂದನು ಕಜೀಬೂರಿನಲ್ಲಿ ವಾಸಿಸುತ್ತಿದ್ದನು.


ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.


ಜೆರಹಳ ಸಂತತಿಯ ಯೆಯೂವೇಲ್ ಮತ್ತು ಅವನ ಆರುನೂರ ತೊಂಭತ್ತು ಮಂದಿ ಸಂಬಂಧಿಕರು ಜೆರುಸಲೇಮಿನಲ್ಲಿ ವಾಸಿಸಿದರು.


ಪೆತಹ್ಯನು ಪ್ರಜೆಗಳ ವಿಷಯದಲ್ಲಿ ರಾಜನ ಪ್ರತಿನಿಧಿಯಾಗಿದ್ದನು. (ಪೆತಹ್ಯನು ಮೆಷೇಜಬೇಲನ ಮಗ; ಮೆಷೇಜಬೇಲನು ಜೆರಹನ ಮಗ; ಜೆರಹನು ಯೆಹೂದನ ಮಗ.)


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು