ಆದಿಕಾಂಡ 43:3 - ಪರಿಶುದ್ದ ಬೈಬಲ್3 ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅದಕ್ಕೆ ಯೆಹೂದನು ತನ್ನ ತಂದೆಗೆ ಹೇಳಿದ್ದೇನಂದರೆ, “ಆ ಮನುಷ್ಯನು ನಮಗೆ ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ಮುಖವನ್ನು ನೋಡಬಾರದು’ ಎಂದು ಖಂಡಿತವಾಗಿ” ಹೇಳಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅದಕ್ಕೆ ಯೆಹೂದನು ಹೀಗೆಂದನು: “ಆ ಮನುಷ್ಯ ನಮಗೆ, ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ದರ್ಶನಕ್ಕೆ ಬರಕೂಡದು’ ಎಂದು ಕಡುಖಂಡಿತವಾಗಿ ಹೇಳಿಬಿಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅದಕ್ಕೆ ಯೆಹೂದನು - ಆ ಮನುಷ್ಯನು ನಮಗೆ, ನಿಮ್ಮ ತಮ್ಮನನ್ನು ಕರಕೊಂಡುಬಂದ ಹೊರತು ನನ್ನ ಮುಖವನ್ನು ನೋಡಕೂಡದು ಎಂದು ಖಂಡಿತವಾಗಿ ಹೇಳಿದನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆಗ ಯೆಹೂದನು ಅವನಿಗೆ, “ಆ ಮನುಷ್ಯನು ನಮಗೆ ನಿಮ್ಮ ಸಹೋದರನು ನಿಮ್ಮ ಸಂಗಡ ಇದ್ದ ಹೊರತು, ನೀವು ನನ್ನ ಮುಖವನ್ನು ನೋಡಬಾರದೆಂದು, ನಮಗೆ ದೃಢವಾಗಿ ನಿರ್ಣಯಿಸಿ ಹೇಳಿದ್ದಾನೆ. ಅಧ್ಯಾಯವನ್ನು ನೋಡಿ |
ಅಬ್ಷಾಲೋಮನು ಯೋವಾಬನಿಗೆ, “ನಾನು ನಿನಗೆ ಸಂದೇಶವನ್ನು ಕಳುಹಿಸಿ ಇಲ್ಲಿಗೆ ಬರಲು ಹೇಳಿ ಕಳುಹಿಸಿದ್ದೆನು. ರಾಜನ ಬಳಿಗೆ ನಿನ್ನನ್ನು ಕಳುಹಿಸಲು ನಾನು ಅಪೇಕ್ಷಿಸಿದೆನು. ಗೆಷೂರಿನಿಂದ ನನ್ನನ್ನು ಮನೆಗೆ ಕರೆಸಲು ಅವನು ಇಚ್ಛಿಸಿದ್ದು ಏಕೆ ಎಂಬುದನ್ನು ನೀನು ಕೇಳಬೇಕೆಂದು ನಾನು ಅಪೇಕ್ಷಿಸಿದೆನು. ನಾನು ಅವನನ್ನು ನೋಡಲಾಗದಿದ್ದರೆ ಗೆಷೂರಿನಲ್ಲಿ ವಾಸಿಸುವುದೇ ನನಗೆ ಚೆನ್ನಾಗಿರುತ್ತಿತ್ತು. ಈಗ ರಾಜನನ್ನು ನೋಡಲು ನನಗೆ ಅವಕಾಶವನ್ನು ಕೊಡು. ನಾನು ಪಾಪವನ್ನು ಮಾಡಿದ್ದರೆ ಅವನು ನನ್ನನ್ನು ಕೊಂದುಬಿಡಲಿ!” ಎಂದನು.