Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 40:3 - ಪರಿಶುದ್ದ ಬೈಬಲ್‌

3 ಆದ್ದರಿಂದ ಅವರನ್ನು ಯೋಸೇಫನಿದ್ದ ಸೆರೆಮನೆಗೆ ಹಾಕಿಸಿದನು. ಪೋಟೀಫರನು ಫರೋಹನ ಕಾವಲುಗಾರ ಅಧಿಕಾರಿಯಾಗಿದ್ದು ಈ ಸೆರೆಮನೆಯ ಜವಾಬ್ದಾರಿಯನ್ನು ಹೊಂದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅವರನ್ನು ಅಂಗರಕ್ಷಕರ ದಳಪತಿಯ ವಠಾರದಲ್ಲಿದ್ದ ಸೆರೆಯಲ್ಲಿ ಹಾಕಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರನ್ನು ಮೈಗಾವಲಿನವರ ದಳವಾಯಿಯ ಮನೆಯೊಳಗೆ ಕಾವಲಲ್ಲಿರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 40:3
6 ತಿಳಿವುಗಳ ಹೋಲಿಕೆ  

ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು.


ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.


ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು.


ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು.


ಸೆರೆಮನೆಯ ಮುಖ್ಯಾಧಿಕಾರಿಯು ಈ ಇಬ್ಬರು ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಸ್ವಲ್ಪಕಾಲದವರೆಗೆ ಆ ಇಬ್ಬರು ಸೆರೆಮನೆಯೊಳಗೆ ಇದ್ದರು.


ನೀವು ನನ್ನ ಮೇಲೆ ಮತ್ತು ಭಕ್ಷ್ಯಗಾರನ ಮೇಲೆ ಕೋಪಗೊಂಡು ನಮ್ಮನ್ನು ಸೆರೆಮನೆಗೆ ಹಾಕಿಸಿದಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು