ಆದಿಕಾಂಡ 4:9 - ಪರಿಶುದ್ದ ಬೈಬಲ್9 ತರುವಾಯ ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನೆಲ್ಲಿ?” ಎಂದು ಕೇಳಿದನು. ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ. ನನ್ನ ತಮ್ಮನನ್ನು ಕಾಯುವುದಾಗಲಿ ನೋಡಿಕೊಳ್ಳುವುದಾಗಲಿ ನನ್ನ ಕೆಲಸವೇ?” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ” ಎಂದು ಕಾಯಿನನು ಉತ್ತರ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಯೆಹೋವನು ಕಾಯಿನನನ್ನು - ನಿನ್ನ ತಮ್ಮನಾದ ಹೇಬೆಲನು ಎಲ್ಲಿ ಎಂದು ಕೇಳಲು ಅವನು - ನಾನರಿಯೆ; ನನ್ನ ತಮ್ಮನನ್ನು ಕಾಯುವವನು ನಾನೋ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು, ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿ |