ಆದಿಕಾಂಡ 39:7 - ಪರಿಶುದ್ದ ಬೈಬಲ್7 ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಹೀಗಿರುವಲ್ಲಿ ಅವನ ದಣಿಯ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ ತನ್ನೊಡನೆ ಸಂಗಮಕ್ಕೆ ಕರೆದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು. ಅಧ್ಯಾಯವನ್ನು ನೋಡಿ |
ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು. ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು. ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.