ಆದಿಕಾಂಡ 38:9 - ಪರಿಶುದ್ದ ಬೈಬಲ್9 ತಾಮಾರಳಲ್ಲಿ ತನಗೆ ಹುಟ್ಟುವ ಮಕ್ಕಳು ತನ್ನವರಾಗುವುದಿಲ್ಲವೆಂದು ಅರಿತುಕೊಂಡು ಓನಾನನು ಆಕೆಯನ್ನು ಕೂಡಿದರೂ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆದರೆ ಓನಾನನು ಈ ರೀತಿ ಆಗುವ ಸಂತಾನವು ತನ್ನದಾಗುವುದಿಲ್ಲವೆಂದು ತಿಳಿದು ಅಣ್ಣನಿಗೆ ಸಂತತಿಯನ್ನು ಹುಟ್ಟಿಸಬಾರದೆಂದು ಯೋಚಿಸಿ ತನ್ನ ಅತ್ತಿಗೆಯೊಂದಿಗೆ ಸಂಗಮಿಸುವಾಗೆಲ್ಲಾ ಅವಳು ಗರ್ಭಧರಿಸದಂತೆ ತನ್ನ ವೀರ್ಯವನ್ನು ನೆಲದ ಮೇಲೆ ಸುರಿಸುತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆದರೆ ಓನಾನನು, ಹೀಗೆ ಆಗುವ ಸಂತಾನ ತನ್ನದಾಗುವುದಿಲ್ಲವೆಂದು ತಿಳಿದುಕೊಂಡನು. ಅಣ್ಣನಿಗೆ ಸಂತತಿ ಹುಟ್ಟಿಸಲು ಅವನು ಒಪ್ಪಲಿಲ್ಲ. ತನ್ನ ಅತ್ತಿಗೆಯಲ್ಲಿ ಸಂಭೋಗ ಮಾಡುವಾಗಲೆ ತನ್ನ ವೀರ್ಯವನ್ನು ಹಾಸಿಗೆಪಾಲು ಮಾಡುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆದರೆ ಓನಾನನು ಈ ರೀತಿಯಾಗಿ ಆಗುವ ಸಂತಾನವು ತನ್ನದಾಗುವದಿಲ್ಲವೆಂದು ತಿಳಿದು ಅಣ್ಣನಿಗೆ ಸಂತತಿಯನ್ನು ಹುಟ್ಟಿಸಲೊಲ್ಲದೆ ತನ್ನ ಅತ್ತಿಗೆಯಲ್ಲಿ ಸಂಗಮಮಾಡುವಾಗೆಲ್ಲಾ ತನ್ನ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು. ಅಧ್ಯಾಯವನ್ನು ನೋಡಿ |