Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 38:21 - ಪರಿಶುದ್ದ ಬೈಬಲ್‌

21 ಅವನು ಏನಯಿಮ್ ಊರಿನ ಕೆಲವು ಗಂಡಸರಿಗೆ, “ಇಲ್ಲಿಯ ದಾರಿಯ ಸಮೀಪದಲ್ಲಿರುತ್ತಿದ್ದ ವೇಶ್ಯೆಯು ಎಲ್ಲಿದ್ದಾಳೆ?” ಎಂದು ಕೇಳಿದನು. ಅದಕ್ಕೆ ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ” ಎಂದು ಉತ್ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅವನು ಅವಳ ಊರಿನವರನ್ನು, “ಏನಯಿಮಿನ ದಾರಿಯ ಬಳಿಯಲ್ಲಿ ಕುಳಿತಿದ್ದ ವೇಶ್ಯಾಸ್ತ್ರೀ ಎಲ್ಲಿರುವಳು” ಎಂದು ಕೇಳಿದ್ದಕ್ಕೆ ಅವರು, “ಇಲ್ಲಿ ಯಾವ ವೇಶ್ಯಾಸ್ತ್ರೀಯೂ ಇಲ್ಲ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅವನು ಅವಳ ಊರಿನವರನ್ನು, “ಏನಯಿಮ್ ಬಳಿ ದಾರಿಪಕ್ಕದಲ್ಲಿ ಕುಳಿತಿದ್ದ ವೇಶ್ಯೆ ಎಲ್ಲಿ?” ಎಂದು ವಿಚಾರಿಸಿದನು. ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅವನು ಅವಳ ಊರಿನವರನ್ನು - ಏನಯಿವಿುನ ಸಮೀಪದಲ್ಲಿ ದಾರಿಯ ಬಳಿಯಲ್ಲಿ ಕೂತಿದ್ದ ದೇವದಾಸಿ ಎಲ್ಲಿರುವಳು ಎಂದು ಕೇಳಿದ್ದಕ್ಕೆ ಅವರು - ಇಲ್ಲಿ ಯಾವ ದೇವದಾಸಿಯೂ ಇಲ್ಲ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ. ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 38:21
3 ತಿಳಿವುಗಳ ಹೋಲಿಕೆ  

ಯೆಹೂದನು ಮಾತು ಕೊಟ್ಟಿದ್ದಂತೆಯೇ ಒಂದು ಆಡುಮರಿಯನ್ನು ತನ್ನ ಸ್ನೇಹಿತನಾದ ಹೀರಾನ ಮೂಲಕ ಏನಯಿಮಿಗೆ ಕಳುಹಿಸಿ ಆ ಮುದ್ರೆಯನ್ನೂ ಊರುಗೋಲನ್ನೂ ತೆಗೆದುಕೊಂಡು ಬರುವಂತೆ ಅವನಿಗೆ ತಿಳಿಸಿದನು. ಆದರೆ ಅವನು ಅವಳನ್ನು ಕಂಡುಹಿಡಿಯಲಾಗಲಿಲ್ಲ.


ಆದ್ದರಿಂದ ಅವನು ಯೆಹೂದನ ಬಳಿಗೆ ಹಿಂತಿರುಗಿ ಬಂದು, “ನಾನು ಆ ವೇಶ್ಯೆಯನ್ನು ಕಂಡುಹಿಡಿಯಲಾಗಲಿಲ್ಲ. ಅದಲ್ಲದೆ ಆ ಸ್ಥಳದ ಗಂಡಸರು ಅಲ್ಲಿ ಒಬ್ಬ ವೇಶ್ಯೆಯೂ ಇಲ್ಲ ಎಂದು ಹೇಳಿದರು” ಅಂದನು.


ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾಸ್ಥಳಗಳನ್ನು ನಿರ್ಮಿಸಿದ್ದೀ. ನೀನು ನಿನ್ನ ಸೌಂದರ್ಯವನ್ನು ಹಾಳುಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನ್ನು ಮಾಡಲು ನಿನ್ನ ಸೌಂದರ್ಯವನ್ನು ಬಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನ್ನ ಸೂಳೆತನವನ್ನು ಹೆಚ್ಚಿಸಿಕೊಂಡೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು