ಆದಿಕಾಂಡ 38:11 - ಪರಿಶುದ್ದ ಬೈಬಲ್11 ಆಗ ಯೆಹೂದನು ತನ್ನ ಸೊಸೆಯಾದ ತಾಮಾರಳಿಗೆ, “ನಿನ್ನ ತಂದೆಯ ಮನೆಗೆ ಹಿಂತಿರುಗಿ ಹೋಗಿ ಅಲ್ಲಿರು. ನನ್ನ ಮಗನಾದ ಶೇಲಹನು ದೊಡ್ಡವನಾಗುವ ತನಕ ಮದುವೆಯಾಗಬೇಡ” ಎಂದು ಹೇಳಿದನು. ಶೇಲಹನು ಸಹ ತನ್ನ ಅಣ್ಣಂದಿರಂತೆ ಸಾಯಬಹುದೆಂದು ಯೆಹೂದನು ಹೆದರಿಕೊಂಡಿದ್ದನು. ಆದ್ದರಿಂದ ತಾಮಾರಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಆ ಮೇಲೆ ಯೆಹೂದನು ಒಂದು ವೇಳೆ ಶೇಲಹನು ತನ್ನ ಅಣ್ಣಂದಿರಂತೆಯೇ ಸತ್ತಾನೆಂದು ಯೋಚಿಸಿ ತನ್ನ ಸೊಸೆಯಾದ ತಾಮಾರಳಿಗೆ, “ನನ್ನ ಮಗನಾದ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿರು” ಎಂದು ಹೇಳಿದನು. ಅವಳು ತಂದೆಯ ಮನೆಗೆ ಹೋಗಿ ಅಲ್ಲೇ ವಾಸಮಾಡಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಅನಂತರ ಯೆಹೂದನು, ಬಹುಶಃ ಶೇಲಹನು ಕೂಡ ತನ್ನ ಅಣ್ಣಂದಿರಂತೆ ಸತ್ತಾನೆಂದು ಆಲೋಚಿಸಿ, ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರುಮನೆಯಲ್ಲಿರು,” ಎಂದು ನೆವಹೇಳಿದನು. ಅಂತೆಯೇ ಅವಳು ತೌರುಮನೆಗೆ ಹೋಗಿ ಅಲ್ಲೇ ವಾಸಮಾಡಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಆಮೇಲೆ ಯೆಹೂದನು - ಒಂದು ವೇಳೆ ಶೇಲಹನೂ ತನ್ನ ಅಣ್ಣಂದಿರಂತೆಯೇ ಸತ್ತಾನೆಂದು ಯೋಚಿಸಿ ತನ್ನ ಸೊಸೆಯಾದ ತಾಮಾರಳಿಗೆ - ನನ್ನ ಮಗನಾದ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರಮನೆಯಲ್ಲಿರು ಎಂದು ನೆವ ಹೇಳಿದನು. ಅವಳು ತೌರಮನೆಗೆ ಹೋಗಿ ಅಲ್ಲೇ ವಾಸಮಾಡಿದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು. ಅಧ್ಯಾಯವನ್ನು ನೋಡಿ |
ತಾಮಾರಳು ಯಾವಾಗಲೂ ವಿಧವೆಯ ವಸ್ತ್ರಗಳನ್ನು ಧರಿಸಿಕೊಂಡಿರುತ್ತಿದ್ದಳು. ಆದರೆ ಈಗ ಆಕೆ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡು ತಿಮ್ನಾ ಊರಿನ ಸಮೀಪದಲ್ಲಿರುವ ಏನಯಿಮೂರಿನ ದಾರಿಯಲ್ಲಿ ಕುಳಿತುಕೊಂಡಳು. ಯೆಹೂದನ ಚಿಕ್ಕಮಗನಾದ ಶೇಲಹನು ಬೆಳೆದು ದೊಡ್ಡವನಾಗಿರುವುದು ತಾಮಾರಳಿಗೆ ತಿಳಿದಿತ್ತು. ಆದರೆ ಆಕೆಗೆ ಅವನನ್ನು ಮದುವೆ ಮಾಡಿಸಲು ಯೆಹೂದನು ಆಲೋಚಿಸಿರಲಿಲ್ಲ.