Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 35:24 - ಪರಿಶುದ್ದ ಬೈಬಲ್‌

24 ರಾಹೇಲಳ ಗಂಡುಮಕ್ಕಳು: ಯೋಸೇಫ ಮತ್ತು ಬೆನ್ಯಾಮೀನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ರಾಹೇಲಳಲ್ಲಿ ಹುಟ್ಟಿದವರು: ಯೋಸೇಫನು ಮತ್ತು ಬೆನ್ಯಾಮೀನನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಜೋಸೆಫ್, ಬೆನ್ಯಾಮೀನ್ - ಇವರಿಬ್ಬರು ರಾಖೇಲಳಲ್ಲಿ ಹುಟ್ಟಿದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಯೋಸೇಫ, ಬೆನ್ಯಾಮೀನ್ ಇವರಿಬ್ಬರು ರಾಹೇಲಳಲ್ಲಿ ಹುಟ್ಟಿದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 35:24
10 ತಿಳಿವುಗಳ ಹೋಲಿಕೆ  

ಯಾಕೋಬನು ಬೆನ್ಯಾಮೀನನನ್ನು ಕಳುಹಿಸಲಿಲ್ಲ. (ಬೆನ್ಯಾಮೀನನು ಯೋಸೇಫನ ಒಡಹುಟ್ಟಿದ ಒಬ್ಬನೇ ತಮ್ಮನಾಗಿದ್ದನು.) ಬೆನ್ಯಾಮೀನನಿಗೆ ಏನಾದರೂ ಕೇಡಾಗಬಹುದೆಂಬ ಭಯ ಯಾಕೋಬನಿಗಿತ್ತು.


ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.


ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.


ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ.


ಬೆನ್ಯಾಮೀನ್ ಕುಲದವರಿಗೆ ಯೆಹೂದ್ಯರ ಮತ್ತು ಯೋಸೇಫ್ಯರ ಪ್ರಾಂತ್ಯಗಳ ಮಧ್ಯದಲ್ಲಿರುವ ಭೂಮಿಯನ್ನು ಕೊಡಲಾಯಿತು. ಬೆನ್ಯಾಮೀನ್ ಕುಲದ ಪ್ರತಿಯೊಂದು ಗೋತ್ರವು ತಮ್ಮ ಭೂಮಿಯನ್ನು ಪಡೆದುಕೊಂಡಿತು. ಇದು ಬೆನ್ಯಾಮೀನ್ ಕುಲದವರಿಗೆ ಆರಿಸಲ್ಪಟ್ಟ ಭೂಮಿಯಾಗಿತ್ತು.


“ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು; ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು; ಮಾಕೀರನ ಕುಲದಿಂದ ನಾಯಕರು ಬಂದರು; ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು.


ನಗರದ್ವಾರದಲ್ಲಿ ಸೇರಿದ್ದ ಜನರೆಲ್ಲರು ಮತ್ತು ಹಿರಿಯರು ಸಾಕ್ಷಿಗಳಾಗಿದ್ದರು. ಅವರು, “ಈ ಸ್ತ್ರೀಯು ನಿನ್ನ ಮನೆಗೆ ಬರುವಳು. ಯೆಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳು ಮತ್ತು ಲೇಯಾಳು ಇಸ್ರೇಲಿನ ಮನೆಯನ್ನು ಕಟ್ಟಿದರು. ಎಫ್ರಾತಿನಲ್ಲಿ ಪ್ರಭಾವ ಶಾಲಿಯಾಗು! ಬೆತ್ಲೆಹೇಮಿನಲ್ಲಿ ಸುಪ್ರಸಿದ್ಧನಾಗು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು