ಆದಿಕಾಂಡ 33:13 - ಪರಿಶುದ್ದ ಬೈಬಲ್13 ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅದಕ್ಕೆ ಯಕೋಬನು, “ನನ್ನೊಡೆಯರಾದ ನಿಮಗೆ ತಿಳಿದಿರುವಂತೆ ನನ್ನ ಮಕ್ಕಳು ಎಳೆಯ ಪ್ರಾಯದವರು; ಈದಿರುವ ದನಕುರಿಗಳೂ ನನಗಿವೆ; ಒಂದೇ ದಿನ ಹೆಚ್ಚಾಗಿ ದಾರಿ ನಡೆಸಿದೆನಾದರೆ ಆಡುಕುರಿಗಳೆಲ್ಲವೂ ಸತ್ತುಹೋದಾವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅದಕ್ಕೆ ಯಾಕೋಬನು - ನನ್ನ ಮಕ್ಕಳು ಎಳೇ ಪ್ರಾಯದವರು; ಅದಲ್ಲದೆ ಈದಿರುವ ದನಕುರಿಗಳು ನನ್ನ ಬಳಿಯಲ್ಲಿರುವದು ಪ್ರಭುವಿಗೆ ತಿಳಿದಿದೆ; ಒಂದೇ ದಿನ ಹೆಚ್ಚಾಗಿ ದಾರಿ ನಡಿಸಿದರೆ ಆಡುಕುರಿಗಳೆಲ್ಲವೂ ಸತ್ತು ಹೋದಾವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು. ಅಧ್ಯಾಯವನ್ನು ನೋಡಿ |
ದಾವೀದನು, “ನಾವು ನಮ್ಮ ದೇವರಿಗೆ ಮಹಾದೊಡ್ಡ ಆಲಯವನ್ನು ಕಟ್ಟಿಸಬೇಕು. ಆದರೆ ನನ್ನ ಮಗನಾದ ಸೊಲೊಮೋನನು ಇನ್ನೂ ಎಳೆಪ್ರಾಯದವನು; ಅವನು ಕಲಿಯ ಬೇಕಾದದ್ದು ಇನ್ನೂ ಬೇಕಾದಷ್ಟಿದೆ. ದೇವಾಲಯವು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗಿದ್ದು ಅದರ ಸೌಂದರ್ಯ ಮತ್ತು ವಿನ್ಯಾಸವು ಹೆಸರುವಾಸಿಯಾಗಿರಬೇಕು. ಅದಕ್ಕಾಗಿಯೇ ನಾನು ಆ ದೇವಾಲಯಕ್ಕಾಗಿ ಸಮಸ್ತವನ್ನು ಸಿದ್ಧಪಡಿಸುತ್ತೇನೆ” ಅಂದುಕೊಂಡನು. ಅಲ್ಲದೆ ಅವನು ಸಾಯುವುದಕ್ಕಿಂತ ಮುಂಚೆ ದೇವಾಲಯವನ್ನು ಕಟ್ಟುವುದಕ್ಕೆ ಬೇಕಾಗಿರುವವುಗಳನ್ನೆಲ್ಲಾ ಕೂಡಿಸಿಟ್ಟನು.