ಆದಿಕಾಂಡ 33:11 - ಪರಿಶುದ್ದ ಬೈಬಲ್11 ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ದೇವರ ಕೃಪೆಯಿಂದ ನನಗೆ ಬೇಕಾದುದೆಲ್ಲ ಇದೆ; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ತಾವು ದಯವಿಟ್ಟು ಅಂಗೀಕರಿಸಬೇಕು,” ಎಂದು ಹೇಳಿ ಒತ್ತಾಯಪಡಿಸಿದ್ದರಿಂದ ಏಸಾವನು ಆ ಕಾಣಿಕೆಯನ್ನು ತೆಗೆದುಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ದೇವರು ನನಗೆ ಕೃಪೆಯನ್ನು ಮಾಡಿದ್ದರಿಂದ ನನಗೆ ಸಮೃದ್ಧಿಯುಂಟು; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು ಎಂದು ಹೇಳಿ ಏಸಾವನನ್ನು ಬಲವಂತಮಾಡಿದ್ದರಿಂದ ಅವನು ಆ ಕಾಣಿಕೆಯನ್ನು ತೆಗೆದುಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು. ಅಧ್ಯಾಯವನ್ನು ನೋಡಿ |