ಆದಿಕಾಂಡ 25:31 - ಪರಿಶುದ್ದ ಬೈಬಲ್31 ಆದರೆ ಯಾಕೋಬನು, “ನಿನ್ನ ಚೊಚ್ಚಲತನದ ಹಕ್ಕನ್ನು ನೀನು ನನಗೆ ಈ ದಿನ ಮಾರಬೇಕು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಯಾಕೋಬನು ಅವನಿಗೆ, “ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿ ಬಿಡು” ಅನ್ನಲು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಅದಕ್ಕೆ ಯಕೋಬ, ‘ನಿನ್ನದಾಗಿರುವ ಜ್ಯೇಷ್ಠಪುತ್ರನ ಹಕ್ಕನ್ನು ನನಗೆ ಮೊದಲು ಮಾರಿಬಿಡು,’ ಎಂದು ಹೇಳಿದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಯಾಕೋಬನು ಅವನಿಗೆ - ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿಬಿಡು ಅನ್ನಲು ಏಸಾವನು - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಆಗ ಯಾಕೋಬನು, “ಈ ಹೊತ್ತು ನಿನ್ನ ಜೇಷ್ಠ ಪುತ್ರನ ಹಕ್ಕನ್ನು ನನಗೆ ಮಾರು,” ಎಂದನು. ಅಧ್ಯಾಯವನ್ನು ನೋಡಿ |
ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.