ಆದಿಕಾಂಡ 24:61 - ಪರಿಶುದ್ದ ಬೈಬಲ್61 ಆಮೇಲೆ ರೆಬೆಕ್ಕಳು ಮತ್ತು ಆಕೆಯ ಸೇವಕಿಯರು ಒಂಟೆಯ ಮೇಲೆ ಹತ್ತಿ ಕುಳಿತುಕೊಂಡು ಆ ಸೇವಕನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಮನೆಗೆ ಮರಳಿ ಪ್ರಯಾಣಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201961 ರೆಬೆಕ್ಕಳೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿದವರಾಗಿ ಅಬ್ರಹಾಮನ ಸೇವಕನ ಹಿಂದೆ ಹೋದರು. ಹೀಗೆ ಆ ಸೇವಕರು ರೆಬೆಕ್ಕಳನ್ನು ಕರೆದುಕೊಂಡು ಹೊರಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)61 ರೆಬೆಕ್ಕಳು ಮತ್ತು ಆಕೆಯ ದಾದಿಯರು ಒಂಟೆಗಳ ಮೇಲೆ ಅಬ್ರಹಾಮನ ಸೇವಕನನ್ನು ಹಿಂಬಾಲಿಸಿ ಹೋದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಹೋದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)61 ರೆಬೆಕ್ಕಳೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿದವರಾಗಿ ಅಬ್ರಹಾಮನ ಸೇವಕನ ಹಿಂದೆ ಹೋದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೊರಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ61 ಆಗ ರೆಬೆಕ್ಕಳೂ, ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ, ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು. ಅಧ್ಯಾಯವನ್ನು ನೋಡಿ |
‘ಖಂಡಿತವಾಗಿ ಅವರು ಗೆದ್ದಿದ್ದಾರೆ, ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ! ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ! ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು. ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು. ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು; ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’