ಆದಿಕಾಂಡ 24:55 - ಪರಿಶುದ್ದ ಬೈಬಲ್55 ರೆಬೆಕ್ಕಳ ತಾಯಿ ಮತ್ತು ಅಣ್ಣನು ಅವರಿಗೆ, “ರೆಬೆಕ್ಕಳು ಸ್ವಲ್ಪ ದಿನಗಳವರೆಗೆ ನಮ್ಮ ಜೊತೆ ಇರಲಿ. ಹತ್ತು ದಿನಗಳವರೆಗಾದರೂ ನಮ್ಮೊಡನೆ ಇರಲಿ. ಆಮೇಲೆ ಆಕೆಯನ್ನು ಕರೆದುಕೊಂಡು ಹೋಗು” ಎಂದು ಹೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201955 ರೆಬೆಕ್ಕಳ ಅಣ್ಣನೂ, ತಾಯಿಯೂ ಅವನಿಗೆ, “ಹುಡುಗಿಯು ಇನ್ನು ಹತ್ತು ದಿನವಾದರೂ ನಮ್ಮಲ್ಲಿರಲಿ; ಆ ಮೇಲೆ ಆಕೆ ಹೋಗಬಹುದು” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)55 ಅದಕ್ಕೆ ರೆಬೆಕ್ಕಳ ಅಣ್ಣ ಹಾಗು ತಾಯಿ, “ಹುಡುಗಿ ಇನ್ನೂ ಎಂಟು ಹತ್ತು ದಿನವಾದರೂ ನಮ್ಮಲ್ಲಿರಲಿ; ಆಮೇಲೆ ಆಕೆ ಹೋಗಬಹುದು,” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)55 ರೆಬೆಕ್ಕಳ ಅಣ್ಣನೂ ತಾಯಿಯೂ ಅವನಿಗೆ -ಹುಡುಗಿಯು ಇನ್ನು ಎಂಟು ಹತ್ತು ದಿನವಾದರೂ ನಮ್ಮಲ್ಲಿರಲಿ; ಆಮೇಲೆ ಆಕೆ ಹೋಗಬಹುದು ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ55 ಅದಕ್ಕೆ ಆಕೆಯ ಸಹೋದರನೂ, ತಾಯಿಯೂ, “ಹುಡುಗಿಯು ಕೆಲವು ದಿನ ಇರಲಿ. ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇದ್ದು ತರುವಾಯ ಹೋಗಲಿ,” ಎಂದರು. ಅಧ್ಯಾಯವನ್ನು ನೋಡಿ |