ಆದಿಕಾಂಡ 24:22 - ಪರಿಶುದ್ದ ಬೈಬಲ್22 ಒಂಟೆಗಳು ನೀರನ್ನು ಕುಡಿದಾದ ಮೇಲೆ ಅವನು ರೆಬೆಕ್ಕಳಿಗೆ ಅರ್ಧತೊಲೆಯ ಒಂದು ಚಿನ್ನದ ಉಂಗುರವನ್ನು ಕೊಟ್ಟನು. ಇದಲ್ಲದೆ ಅವನು ಆಕೆಗೆ ಹತ್ತು ತೊಲೆಯ ಎರಡು ಚಿನ್ನದ ಬಳೆಗಳನ್ನು ಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಒಂಟೆಗಳು ಕುಡಿದ ನಂತರ ಅವನು ಆಕೆಗೆ ಅರ್ಧ ತೊಲಾ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನು, ಆಕೆಯ ಕೈಗಳಿಗೆ ಹತ್ತು ತೊಲಾ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ಕೊಟ್ಟು, “ನೀನು ಯಾರ ಮಗಳು? ದಯವಿಟ್ಟು ನನಗೆ ಹೇಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಒಂಟೆಗಳು ಕುಡಿದಾದ ನಂತರ ಅವನು ಆಕೆಯ ಮೂಗಿಗೆ ಅರ್ಧ ತೊಲೆಯ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನೂ ಕೈಗಳಿಗೆ ಹತ್ತು ತೊಲೆಯ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ತೊಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಒಂಟೆಗಳು ಕುಡಿದ ನಂತರ ಅವನು ಆಕೆಯ ಮೂಗಿಗೆ ಅರ್ಧ ತೊಲೆಯ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನೂ ಆಕೆಯ ಕೈಗಳಿಗೆ ಹತ್ತು ತೊಲೆಯ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ಇಟ್ಟು - ನೀನು ಯಾರ ಮಗಳು? ದಯವಿಟ್ಟು ನನಗೆ ಹೇಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಒಂಟೆಗಳು ನೀರು ಕುಡಿದಾದ ಮೇಲೆ, ಆ ಮನುಷ್ಯನು ಅರ್ಧ ತೊಲೆಯ ತೂಕದ ಚಿನ್ನದ ಮೂಗುತಿಯನ್ನು, ಹತ್ತು ತೊಲೆ ತೂಕದ ಎರಡು ಬಳೆಗಳನ್ನು ಆಕೆಗೆ ಕೊಟ್ಟನು. ಅಧ್ಯಾಯವನ್ನು ನೋಡಿ |