Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:31 - ಪರಿಶುದ್ದ ಬೈಬಲ್‌

31 ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಕುಲಭಾಷಾ ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಇವರೇ ತಮ್ಮ ಕುಟುಂಬಗಳ, ತಮ್ಮ ಭಾಷೆಗಳ ಪ್ರಕಾರ, ತಮ್ಮ ದೇಶಗಳಲ್ಲಿ, ತಮ್ಮ ಜನಾಂಗಗಳ ಪ್ರಕಾರ ಶೇಮನ ಪುತ್ರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:31
5 ತಿಳಿವುಗಳ ಹೋಲಿಕೆ  

ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು.


ತೀರ ಪ್ರದೇಶದ ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು.


ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.


ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು.


ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು