Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:21 - ಪರಿಶುದ್ದ ಬೈಬಲ್‌

21 ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಹಿಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗು ಸಹ ಮಕ್ಕಳಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಇಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೆ ಸಹ ಸಂತಾನವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೆಫೆತನ ಹಿರಿಯ ಸಹೋದರನೂ ಏಬೆರನ ಮಕ್ಕಳ ಮೂಲಪುರುಷನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:21
7 ತಿಳಿವುಗಳ ಹೋಲಿಕೆ  

ಸೈಪ್ರಸ್‌ನ ತೀರಗಳಿಂದ ಹಡಗುಗಳು ಬರುವವು. ಅವರು ಅಶ್ಶೂರ್ಯವನ್ನೂ ಏಬೆರವನ್ನೂ ಸೋಲಿಸುವರು; ಆದರೆ ಅವರು ಸಹ ನಾಶವಾಗುವರು.”


ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು.


ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್.


ಆದರೆ ಕೇನ್ಯರೇ, ಅಶ್ಶೂರ್ಯವು ನಿಮ್ಮನ್ನು ಸೆರೆ ಒಯ್ಯುವಾಗ ಅದು ನಾಶವಾಗುವುದು.”


ನೋಹನು 500 ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂವರು ಗಂಡುಮಕ್ಕಳನ್ನು ಪಡೆದನು.


ಶೇಮನ ಗಂಡುಮಕ್ಕಳು ಯಾರೆಂದರೆ: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. ಅರಾಮನ ಮಕ್ಕಳು ಯಾರೆಂದರೆ: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು