ಅರಣ್ಯಕಾಂಡ 5:21 - ಪರಿಶುದ್ದ ಬೈಬಲ್21 ಆದ್ದರಿಂದ ನೀನು ಈ ವಿಶೇಷ ಜಲವನ್ನು ಕುಡಿಯುವಾಗ, ನಿನಗೆ ಹಾನಿಯುಂಟಾಗುವುದು. ನಿನಗೆ ಮಕ್ಕಳಾಗುವುದಿಲ್ಲ. ನೀನು ಬಸುರಾಗಿದ್ದರೆ, ನಿನ್ನ ಮಗು ಸಾಯುವುದು. ಆಗ ನಿನ್ನ ಜನರು ನಿನ್ನನ್ನು ದೂರಮಾಡಿ ನಿನ್ನ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುವರು.’ “ಬಳಿಕ ಯಾಜಕನು ಆ ಸ್ತ್ರೀಗೆ ಪ್ರಮಾಣ ಮಾಡಲು ಹೇಳಬೇಕು. ಅವಳು, ‘ನಾನು ಸುಳ್ಳಾಡಿದ್ದರೆ, ಈ ಕೆಟ್ಟ ಸಂಗತಿಗಳು ನನಗೆ ಸಂಭವಿಸಲಿ’ ಎಂದು ಹೇಳಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ, ನಿನ್ನ ಹೊಟ್ಟೆಯು ಉಬ್ಬುವಂತೆ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇಮಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಸರ್ವೇಶ್ವರನು ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ, ನಿನ್ನ ಹೊಟ್ಟೆ ಉಬ್ಬುವಂತೆ ಮಾಡಿ, ನೀನು ನಿನ್ನ ಜನರ ಮಧ್ಯೆ ಶಾಪಗ್ರಸ್ತಳನ್ನಾಗಿ ಮಾಡಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆಯೂ ಹೊಟ್ಟೆ ಉಬ್ಬುವಂತೆಯೂ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇವಿುಸಲಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಯೆಹೋವ ದೇವರು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವನು. ನಿನ್ನ ಜನರು ನಿನ್ನನ್ನು ಶಪಿಸುವರು, ತಿರಸ್ಕರಿಸುವರು. ಅಧ್ಯಾಯವನ್ನು ನೋಡಿ |