ಅರಣ್ಯಕಾಂಡ 4:5 - ಪರಿಶುದ್ದ ಬೈಬಲ್5 “ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ದಂಡು ಹೊರಡುವಾಗ, ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಬಂದು ಮಹಾಪವಿತ್ರಸ್ಥಾನವನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಮಂಜೂಷದ ಆಜ್ಞಾಶಾಸನವನ್ನು ಮುಚ್ಚಿಬಿಟ್ಟು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ದಂಡು ಹೊರಡುವಾಗ ಆರೋನನೂ ಅವನ ಮಕ್ಕಳೂ ಒಳಗೆ ಬಂದು [ಮಹಾಪವಿತ್ರಸ್ಥಾನವನ್ನು] ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಿಬಿಟ್ಟು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ, ಅಧ್ಯಾಯವನ್ನು ನೋಡಿ |
ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!