Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 4:49 - ಪರಿಶುದ್ದ ಬೈಬಲ್‌

49 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನಿಗೆ ಅವನವನ ಕೆಲಸವೂ, ಜವಾಬ್ದಾರಿಯೂ ನಿಗದಿಪಡಿಸಲಾಯಿತು. ಹೀಗೆ ಯೆಹೋವನ ಆಜ್ಞೆಯ ಮೇರೆಗೆ ಲೆಕ್ಕವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಯೊಬ್ಬನಿಗೆ ಅವನವನ ಕೆಲಸ ಹಾಗೂ ಹೊಣೆಯನ್ನು ಗೊತ್ತುಮಾಡಲಾಯಿತು. ಹೀಗೆ ಸರ್ವೇಶ್ವರನ ಆಜ್ಞೆಯ ಮೇರೆಗೆ ಜನಗಣತಿ ನಡೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನಿಗೆ ಅವನವನ ಕೆಲಸವೂ ಹೊರೆಯೂ ಗೊತ್ತು ಮಾಡಲ್ಪಟ್ಟಿತು. ಹೀಗೆ ಯೆಹೋವನ ಆಜ್ಞೆಯ ಮೇರೆಗೆ ಲೆಕ್ಕವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ, ಹೊರುವುದಕ್ಕಾಗಿಯೂ ಜವಾಬ್ದಾರಿಕೆ ಕೊಡಲಾಯಿತು. ಹೀಗೆ ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಎಣಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 4:49
18 ತಿಳಿವುಗಳ ಹೋಲಿಕೆ  

ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು.


ಈ ಕೆಳಕಂಡ ವಸ್ತುಗಳನ್ನು ಮೆರಾರೀಯರು ವರ್ಗಾವಣೆಗಾಗಿ ಕಟ್ಟುವರು, ವರ್ಗಾಯಿಸುವರು ಮತ್ತು ಕಾವಲುಕಾಯುವರು: ಪವಿತ್ರ ಡೇರೆಯ ಚೌಕಟ್ಟುಗಳು, ಅದರ ಅಡ್ಡಪಟ್ಟಿಗಳು, ಅದರ ಸ್ತಂಭಗಳು, ಅದರ ಗದ್ದಿಗೇಕಲ್ಲುಗಳು,


“ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆಯಲ್ಲಿಯೂ ಗೇರ್ಷೋನ್ಯರು ಮಾಡತಕ್ಕ ಕೆಲಸ ಯಾವುದೆಂದರೆ:


ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:


“ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ.


ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಿದರು. ಮೆರಾರೀಯರ ಕುಲಗಳಿಂದ ಈ ಗಂಡಸರನ್ನು ದಾಖಲಾತಿ ಮಾಡಿಕೊಳ್ಳಲಾಯಿತು.


ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಗೇರ್ಷೋನ್ಯರನ್ನು ಲೆಕ್ಕಿಸಿದರು. ಅವರಲ್ಲಿ ದೇವದರ್ಶನಗುಡಾರದ ವಿಶೇಷ ಕೆಲಸವನ್ನು ಮಾಡತಕ್ಕವರು ಇವರೇ.


ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.


ಮೋಶೆಯು ಯೆಹೋವನಿಗೆ ವಿಧೇಯನಾಗಿ ಆತನ ಆಜ್ಞೆಯಂತೆ ಬೆಳ್ಳಿಯನ್ನು ಆರೋನನಿಗೂ ಅವನ ಪುತ್ರರಿಗೂ ಕೊಟ್ಟನು.


ಯೆಹೋವನ ಆಜ್ಞೆಯ ಪ್ರಕಾರ ಮೋಶೆಯು ಲೇವಿಯರನ್ನು ಇತರ ಇಸ್ರೇಲರೊಂದಿಗೆ ಲೆಕ್ಕಿಸಲಿಲ್ಲ.


ಆದರೆ ಲೇವಿ ಕುಲದ ಕುಟುಂಬಗಳು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ.


ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:


ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು