Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 4:28 - ಪರಿಶುದ್ದ ಬೈಬಲ್‌

28 ದೇವದರ್ಶನಗುಡಾರಕ್ಕೋಸ್ಕರ ಮತ್ತು ತಮ್ಮ ಕಾವಲಿನ ಕರ್ತವ್ಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಕನಾಗಿರಬೇಕು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಕೆಲಸ ಇದೇ. ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಣೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇದೇ. ಮಹಾಯಾಜಕ ಆರೋನನ ಮಗ ಈತಾಮಾರನು ಅವರ ಮೇಲ್ವಿಚಾರಣೆಯನ್ನು ಮಾಡಬೇಕು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಣೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಗೇರ್ಷೋನ್ಯರ ಕುಟುಂಬದವರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯೂ ಇದೆ. ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವುದು ಅವರಿಗೆ ಅಪ್ಪಣೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 4:28
6 ತಿಳಿವುಗಳ ಹೋಲಿಕೆ  

ದೇವದರ್ಶನಗುಡಾರಕ್ಕೋಸ್ಕರ ಮೆರಾರೀಯರು ಮಾಡತಕ್ಕ ಕೆಲಸ ಇದೇ. ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು ಮಹಾಯಾಜಕ ಆರೋನನ ಮಗನಾದ ಈತಾಮಾರನ ಜವಾಬ್ದಾರಿಯಾಗಿದೆ.”


ಗೇರ್ಷೋನ್ಯರು ಮಾಡುವ ಎಲ್ಲಾ ಕೆಲಸಗಳನ್ನು ಅಂದರೆ ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆ ಮಾಡುವುದರಲ್ಲಿಯೂ ಆರೋನ ಮತ್ತು ಅವನ ಪುತ್ರರು ಮಾರ್ಗದರ್ಶನ ನೀಡುವರು. ಗೇರ್ಷೋನ್ಯರು ವರ್ಗಾಯಿಸುವ ಎಲ್ಲವನ್ನು ಅವರೇ ಕಾಯಬೇಕೆಂಬ ಜವಾಬ್ದಾರಿಕೆಯನ್ನು ನೀನು ಅವರಿಗೆ ಕೊಡು.


“ನೀನು ಮೆರಾರೀಯರನ್ನೂ ಅವರ ಕುಲಗಳಿಗನುಗುಣವಾಗಿ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸು.


ಒಡಂಬಡಿಕೆಯ ಗುಡಾರವಾದ ಪವಿತ್ರಗುಡಾರವನ್ನು ಮಾಡಲು ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಬರೆದಿಡಬೇಕೆಂದು ಮೋಶೆಯು ಲೇವಿಯರಿಗೆ ಆಜ್ಞಾಪಿಸಿದನು. ಈ ಪಟ್ಟಿಯು ಆರೋನನ ಮಗನಾದ ಈತಾಮಾರನ ವಶದಲ್ಲಿ ಇತ್ತು.


ಅವನು ಗೇರ್ಷೋನ್ ಗೋತ್ರಪುರುಷರಿಗೆ ಅವರ ಕೆಲಸಕ್ಕೆ ಅಗತ್ಯವಾಗಿದ್ದ ಎರಡು ಬಂಡಿಗಳನ್ನು ಮತ್ತು ಎರಡು ಜೊತೆ ಎತ್ತುಗಳನ್ನು ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು