ಅರಣ್ಯಕಾಂಡ 4:16 - ಪರಿಶುದ್ದ ಬೈಬಲ್16 “ಮಹಾಯಾಜಕನಾದ ಆರೋನನ ಮಗನಾದ ಎಲ್ಲಾಜಾರನು ಇಡೀ ಪವಿತ್ರ ಗುಡಾರವನ್ನು ಮತ್ತು ಎಲ್ಲಾ ಪವಿತ್ರಸ್ಥಳವನ್ನು ಮತ್ತು ಅದರೊಳಗಿರುವ ಎಲ್ಲಾ ಪಾತ್ರೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ದೀಪದ ಎಣ್ಣೆಗೂ ಪರಿಮಳಧೂಪಕ್ಕೂ ದೈನಂದಿನ ಧಾನ್ಯಸಮರ್ಪಣೆಗೂ ಅಭಿಷೇಕತೈಲಕ್ಕೂ ಅವನು ಜವಾಬ್ದಾರನಾಗಿದ್ದಾನೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ದೀಪದ ಎಣ್ಣೆಯನ್ನೂ, ಪರಿಮಳಧೂಪವನ್ನೂ, ನಿತ್ಯವಾಗಿ ನೈವೇದ್ಯಮಾಡುವ ಧಾನ್ಯದ್ರವ್ಯವನ್ನೂ, ಅಭಿಷೇಕತೈಲವನ್ನೂ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಅದಲ್ಲದೆ ದೇವದರ್ಶನದ ಗುಡಾರದ ಎಲ್ಲಾ ಭಾಗಗಳೂ ಅದರಲ್ಲಿಯೂ ಅದರ ಪಾತ್ರೆಗಳಲ್ಲಿಯೂ ಇರುವ ಸಮಸ್ತ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಮಹಾಯಾಜಕ ಆರೋನನ ಮಗ ಎಲ್ಲಾಜಾರನು ದೀಪದ ಎಣ್ಣೆಯನ್ನು, ಪರಿಮಳ ಧೂಪವನ್ನು, ಅನುದಿನ ನೈವೇದ್ಯ ಮಾಡುವ ಧಾನ್ಯದ್ರವ್ಯಗಳನ್ನು ಹಾಗೂ ಅಭಿಷೇಕ ತೈಲವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು. ದೇವದರ್ಶನದ ಗುಡಾರದ ಎಲ್ಲ ಭಾಗಗಳು, ಅದರಲ್ಲಿರುವ ಸಮಸ್ತ ವಸ್ತುಗಳು ಪಾತ್ರೆಪರಿಕರಗಳು ಹಾಗೂ ಅವುಗಳಲ್ಲಿರುವುದೆಲ್ಲವೂ ಅವನ ಮೇಲ್ವಿಚಾರಣೆಯಲ್ಲಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ದೀಪದ ಎಣ್ಣೆಯನ್ನೂ ಪರಿಮಳಧೂಪವನ್ನೂ ನಿತ್ಯವಾಗಿ ನೈವೇದ್ಯ ಮಾಡುವ ಧಾನ್ಯದ್ರವ್ಯವನ್ನೂ ಅಭೀಷೇಕ ತೈಲವನ್ನೂ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಅದಲ್ಲದೆ ದೇವದರ್ಶನದ ಗುಡಾರದ ಎಲ್ಲಾ ಭಾಗಗಳೂ ಅದರಲ್ಲಿಯೂ ಅದರ ಪಾತ್ರೆಗಳಲ್ಲಿಯೂ ಇರುವ ಸಮಸ್ತ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ಯಾಜಕನಾದ ಆರೋನನ ಮಗ ಎಲಿಯಾಜರನ ಕೆಲಸ ಯಾವುದೆಂದರೆ, ದೀಪದ ಎಣ್ಣೆಯೂ, ಸುಗಂಧ ಧೂಪವೂ, ನಿತ್ಯದ ಧಾನ್ಯ ಸಮರ್ಪಣೆಯೂ, ಅಭಿಷೇಕದ ತೈಲವೂ, ಸಮಸ್ತ ಗುಡಾರವೂ, ಅದರಲ್ಲಿರುವ ಸಕಲವೂ, ಪರಿಶುದ್ಧ ಸ್ಥಳದಲ್ಲಿರುವ ಅದರ ಸಾಮಗ್ರಿಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.” ಅಧ್ಯಾಯವನ್ನು ನೋಡಿ |
ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ.
“ಆರೋನನು ಮಹಾಯಾಜಕನಾಗಿ ಅಭಿಷೇಕಿಸಲ್ಪಡುವ ದಿನದಂದು ಅವನು ಮತ್ತು ಅವನ ಪುತ್ರರು ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಎಂಟು ಬಟ್ಟಲು ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು.