ಅರಣ್ಯಕಾಂಡ 30:8 - ಪರಿಶುದ್ದ ಬೈಬಲ್8 ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆದರೆ ಗಂಡನು ಕೇಳಿದಾಗಲೇ ಕ್ಷಮಿಸಿ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಆ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಆದರೆ ಗಂಡನು, ಕೇಳಿದಾಗಲೆ ಬೇಡವೆಂದು ಆಜ್ಞೆ ಮಾಡಿದರೆ ಆ ಹರಕೆ ಇಲ್ಲವೆ ಆ ಅವಿಚಾರ ಪ್ರತಿಜ್ಞೆ ನಿರರ್ಥಕವಾಗುತ್ತವೆ. ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆದರೆ ಗಂಡನು ಕೇಳಿದಾಗಲೇ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಅವಿಚಾರ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದರೆ ಅವಳ ಗಂಡನು ಅದನ್ನು ಕೇಳಿದಾಗ ಬೇಡವೆಂದು ತಡೆದು, ಅವಳ ಮೇಲೆ ಇರುವ ಅವಳ ಹರಕೆಯನ್ನೂ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆಯನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಯೆಹೋವ ದೇವರು ಅವಳಿಗೆ ಕ್ಷಮಿಸುವರು. ಅಧ್ಯಾಯವನ್ನು ನೋಡಿ |
ಆಮೇಲೆ ಹೆಂಗಸರು ಮಾತನಾಡಿದರು. ಅವರು ಯೆರೆಮೀಯನಿಗೆ ಹೀಗೆ ಹೇಳಿದರು, “ನಾವು ಏನು ಮಾಡುತ್ತಿದ್ದೆವೆಂಬುದು ನಮ್ಮ ಗಂಡಂದಿರಿಗೆ ಗೊತ್ತಿತ್ತು. ಸ್ವರ್ಗದ ರಾಣಿಗೆ ನೈವೇದ್ಯವನ್ನು ಮಾಡುವದಕ್ಕೆ ನಾವು ಅವರ ಅಪ್ಪಣೆಯನ್ನು ಪಡೆದಿದ್ದೆವು. ಅವಳಿಗೆ ಪಾನನೈವೇದ್ಯವನ್ನು ಮಾಡುವದಕ್ಕೂ ಅವರ ಅಪ್ಪಣೆಯನ್ನು ಪಡೆದಿದ್ದೆವು. ನಾವು ಅವಳ ಆಕಾರದ ಹೋಳಿಗೆಯನ್ನು ಮಾಡುತ್ತಿದ್ದೆವೆಂಬುದೂ ನಮ್ಮ ಗಂಡಂದಿರಿಗೆ ಗೊತ್ತಿತ್ತು.”