ಅರಣ್ಯಕಾಂಡ 30:12 - ಪರಿಶುದ್ದ ಬೈಬಲ್12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಅಂಥವಳು ಯೆಹೋವನಿಗೆ ಹರಕೆ ಮಾಡಿದರೂ, ದೋಷಿಯೆಂದು ಎಣಿಸಲ್ಪಡುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುತ್ತವೆ. ಗಂಡನು ರದ್ದುಮಾಡಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ರದ್ದುಮಾಡಿದ್ದರಿಂದ ಅಂಥವಳು ಯೆಹೋವನಿಂದ ದೋಷಿಯೆಂದು ಎಣಿಸಲ್ಪಡುವದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕ ಮಾಡಿದ ಪಕ್ಷದಲ್ಲಿ ಅವಳ ಹರಕೆಗಳಿಗೋಸ್ಕರವೂ ಅವಳು ಕೈಗೊಂಡ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವುದಾಗಲಿ ನಿಲ್ಲದು. ಅವಳ ಗಂಡನು ಅವುಗಳನ್ನು ನಿರರ್ಥಕ ಮಾಡಿದ್ದಾನೆ. ಯೆಹೋವ ದೇವರು ಅವಳಿಗೆ ಕ್ಷಮಿಸುವರು. ಅಧ್ಯಾಯವನ್ನು ನೋಡಿ |
ನಾವು ಸ್ವರ್ಗದ ರಾಣಿಗೆ ನೈವೇದ್ಯವನ್ನು ಅರ್ಪಿಸುವದಾಗಿ ಹರಕೆ ಮಾಡಿದ್ದೇವೆ ಮತ್ತು ನಮ್ಮ ಹರಕೆಗಳನ್ನೆಲ್ಲ ಪೂರೈಸುತ್ತೇವೆ. ನಾವು ನೈವೇದ್ಯವನ್ನು ಕೊಡುತ್ತೇವೆ ಮತ್ತು ಅವಳ ಪೂಜೆಗಾಗಿ ಪಾನನೈವೇದ್ಯವನ್ನು ಅರ್ಪಿಸುತ್ತೇವೆ. ನಾವು ಮೊದಲು ಹಾಗೆಯೇ ಮಾಡಿದ್ದೇವೆ. ನಮ್ಮ ಪೂರ್ವಿಕರು, ನಮ್ಮ ರಾಜರು, ನಮ್ಮ ಅಧಿಕಾರಿಗಳು ಮೊದಲು ಮಾಡಿದಂತೆಯೇ ನಾವೆಲ್ಲರೂ ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಪಟ್ಟಣಗಳಲ್ಲಿ ಮಾಡಿದ್ದೆವು. ನಾವು ಸ್ವರ್ಗದ ರಾಣಿಯನ್ನು ಪೂಜಿಸುವ ಕಾಲದಲ್ಲಿ ನಮ್ಮಲ್ಲಿ ಸಾಕಷ್ಟು ಆಹಾರವಿತ್ತು. ನಾವು ಜಯಶೀಲರಾಗಿದ್ದೆವು. ನಮಗೆ ಕೆಟ್ಟದ್ದೇನೂ ಆಗಿರಲಿಲ್ಲ.
ಆಮೇಲೆ ಹೆಂಗಸರು ಮಾತನಾಡಿದರು. ಅವರು ಯೆರೆಮೀಯನಿಗೆ ಹೀಗೆ ಹೇಳಿದರು, “ನಾವು ಏನು ಮಾಡುತ್ತಿದ್ದೆವೆಂಬುದು ನಮ್ಮ ಗಂಡಂದಿರಿಗೆ ಗೊತ್ತಿತ್ತು. ಸ್ವರ್ಗದ ರಾಣಿಗೆ ನೈವೇದ್ಯವನ್ನು ಮಾಡುವದಕ್ಕೆ ನಾವು ಅವರ ಅಪ್ಪಣೆಯನ್ನು ಪಡೆದಿದ್ದೆವು. ಅವಳಿಗೆ ಪಾನನೈವೇದ್ಯವನ್ನು ಮಾಡುವದಕ್ಕೂ ಅವರ ಅಪ್ಪಣೆಯನ್ನು ಪಡೆದಿದ್ದೆವು. ನಾವು ಅವಳ ಆಕಾರದ ಹೋಳಿಗೆಯನ್ನು ಮಾಡುತ್ತಿದ್ದೆವೆಂಬುದೂ ನಮ್ಮ ಗಂಡಂದಿರಿಗೆ ಗೊತ್ತಿತ್ತು.”