ಅರಣ್ಯಕಾಂಡ 3:46 - ಪರಿಶುದ್ದ ಬೈಬಲ್46 ಲೇವಿಯರ ಸಂಖ್ಯೆ 22,000. ಆದರೆ ಬೇರೆ ಕುಟುಂಬಗಳ ಚೊಚ್ಚಲು ಪುತ್ರರ ಸಂಖ್ಯೆ 22,273. ಹೀಗೆ ಲೇವಿಯರಿಗಿಂತ 273 ಮಂದಿ ಹೆಚ್ಚು ಚೊಚ್ಚಲು ಪುತ್ರರಿರುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201946 “ಲೇವಿಯರ ಸಂಖ್ಯೆಗಿಂತ ಹೆಚ್ಚಾಗಿ 273 ಮಂದಿ ಚೊಚ್ಚಲರು ಹೆಚ್ಚಾಗಿ ಇಸ್ರಾಯೇಲರಲ್ಲಿ ಇರುವುದರಿಂದ ಅವರನ್ನು ಬಿಡಿಸುವುದಕ್ಕಾಗಿ ಒಬ್ಬೊಬ್ಬರಿಗೆ ಐದೈದು ಶೆಕೆಲ್ ಮೇರೆಗೆ ಈಡು ತೆಗೆದುಕೊಳ್ಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)46 ಲೇವಿಯರ ಸಂಖ್ಯೆಗಿಂತ 273 ಮಂದಿ ಜೇಷ್ಠರು ಇಸ್ರಯೇಲರಲ್ಲಿ ಹೆಚ್ಚಾಗಿದ್ದಾರೆ. ಆದುದರಿಂದ ಅವರನ್ನು ವಿಮೋಚಿಸುವುದಕ್ಕಾಗಿ ತಲೆ ಒಂದಕ್ಕೆ ಐದು ಬೆಳ್ಳಿ ನಾಣ್ಯಗಳಂತೆ ಈಡು ತೆಗೆದುಕೊ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)46 ಲೇವಿಯರ ಸಂಖ್ಯೆಗಿಂತ ಹೆಚ್ಚಾಗಿ 273 ಮಂದಿ ಚೊಚ್ಚಲರು ಇಸ್ರಾಯೇಲ್ಯರಲ್ಲಿ ಇರುವದರಿಂದ ಅವರನ್ನು ಬಿಡಿಸುವದಕ್ಕೋಸ್ಕರ ತಲೆ ಒಂದಕ್ಕೆ ಐದೈದು ರೂಪಾಯಿಯ ಮೇರೆಗೆ ಈಡು ತೆಗೆದುಕೊಳ್ಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ46 ಇಸ್ರಾಯೇಲರ ಜೇಷ್ಠರಾದವರಲ್ಲಿ ಲೇವಿಯರಿಗಿಂತ ಹೆಚ್ಚಾಗಿರುವ 273 ಮಂದಿಯ ವಿಮೋಚನೆಯ ಕ್ರಯವಾಗಿ ಅಧ್ಯಾಯವನ್ನು ನೋಡಿ |
ಈಜಿಪ್ಟಿನಲ್ಲಿ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ನಮ್ಮನ್ನು ಕಳುಹಿಸಿಕೊಡಲಿಲ್ಲ. ಆಗ ಯೆಹೋವನು ಆ ದೇಶದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. (ಯೆಹೋವನು ಚೊಚ್ಚಲು ಪಶುಗಳನ್ನು ಮತ್ತು ಚೊಚ್ಚಲು ಗಂಡುಮಕ್ಕಳನ್ನು ಕೊಂದನು.) ಆದ್ದರಿಂದ ನಾವು ಚೊಚ್ಚಲಾದ ಪ್ರತಿಯೊಂದು ಗಂಡುಪಶುವನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸುತ್ತೇವೆ. ಈ ಕಾರಣದಿಂದಲೇ, ನಮ್ಮ ಪ್ರತಿಯೊಂದು ಗಂಡುಮಗುವನ್ನು ಯೆಹೋವನಿಂದ ಮತ್ತೆ ಖರೀದಿ ಮಾಡುತ್ತೇವೆ’ ಎಂದು ಹೇಳುವಿರಿ.