ಅರಣ್ಯಕಾಂಡ 29:39 - ಪರಿಶುದ್ದ ಬೈಬಲ್39 “ಮೇಲೆ ತಿಳಿಸಿರುವ ಸಾರ್ವಜನಿಕ ಯಜ್ಞಗಳನ್ನು ಇಡೀ ಸಮುದಾಯಕ್ಕೋಸ್ಕರ ಹಬ್ಬದ ದಿನಗಳಲ್ಲಿ ನಿಮ್ಮ ಸರ್ವಾಂಗಹೋಮಗಳನ್ನಾಗಿಯೂ ಧಾನ್ಯಾರ್ಪಣೆಗಳನ್ನಾಗಿಯೂ ಪಾನದ್ರವ್ಯಾರ್ಪಣೆಗಳನ್ನಾಗಿಯೂ ಮತ್ತು ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಬೇಕು. ನಿಮ್ಮ ವೈಯಕ್ತಿಕ ಹರಕೆಯ ಅರ್ಪಣೆ ಮತ್ತು ಸ್ವಯಿಚ್ಛಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 “‘ನೀವು ಯೆಹೋವನಿಗೆ ಕಾಣಿಕೆಯಾಗಿ ಹರಕೆಯನ್ನು ತೀರಿಸುವುದಕ್ಕಾಗಲಿ ಮಾಡುವ ಸರ್ವಾಂಗಹೋಮ, ಧಾನ್ಯದ್ರವ್ಯ ನೈವೇದ್ಯ, ಪಾನದ್ರವ್ಯ, ಸಮಾಧಾನಯಜ್ಞ ಇವುಗಳನ್ನಲ್ಲದೆ ಹಬ್ಬಗಳ ದಿನಗಳಲ್ಲಿ ಮೇಲೆ ಸೂಚಿಸಿರುವ ಯಜ್ಞಗಳನ್ನೂ ಹೆಚ್ಚಾಗಿ ಮಾಡಬೇಕು.’” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ‘ನೀವು ಕಾಣಿಕೆಯಾಗಿ ಆಗಲಿ, ಹರಕೆಯನ್ನು ತೀರಿಸುವುದಕ್ಕಾಗಿ ಆಗಲಿ ಮಾಡುವ ದಹನಬಲಿ, ಧಾನ್ಯನೈವೇದ್ಯ, ಪಾನಾರ್ಪಣೆ, ಸಮಾಧಾನಬಲಿ ಇವುಗಳನ್ನು ಮಾತ್ರವಲ್ಲದೆ ಹಬ್ಬದ ದಿನಗಳಲ್ಲಿ ಮೇಲೆ ಸೂಚಿಸಿರುವ ಬಲಿಗಳನ್ನು ಹೆಚ್ಚಾಗಿ ಮಾಡಬೇಕು’.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ನೀವು ಕಾಣಿಕೆಯಾಗಿಯಾಗಲಿ ಹರಕೆಯನ್ನು ತೀರಿಸುವದಕ್ಕಾಗಿಯಾಗಲಿ ಮಾಡುವ ಸರ್ವಾಂಗಹೋಮ, ಧಾನ್ಯದ್ರವ್ಯ ನೈವೇದ್ಯ, ಪಾನದ್ರವ್ಯಾರ್ಪಣೆ, ಸಮಾಧಾನಯಜ್ಞ ಇವುಗಳನ್ನಲ್ಲದೆ ಹಬ್ಬಗಳ ದಿನಗಳಲ್ಲಿ ಮೇಲೆ ಸೂಚಿಸಿರುವ ಯಜ್ಞಗಳನ್ನೂ ಹೆಚ್ಚಾಗಿ ಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ39 “ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ” ಅಧ್ಯಾಯವನ್ನು ನೋಡಿ |
ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮಾವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.
ಯೆಹೋವನನ್ನು ಜ್ಞಾಪಕಮಾಡುವ ಸಬ್ಬತ್ ದಿನಗಳ ಜೊತೆಗೆ ನೀವು ಆ ಹಬ್ಬದ ದಿನಗಳನ್ನು ಆಚರಿಸಬೇಕು. ನೀವು ಆ ಕಾಣಿಕೆಗಳನ್ನು ನಿಮ್ಮ ಇತರ ಕಾಣಿಕೆಗಳ ಜೊತೆಗೆ ಅರ್ಪಿಸಬೇಕು. ನೀವು ಮಾಡಿದ ಹರಕೆಗಳನ್ನು ನೆರವೇರಿಸುವುದಕ್ಕಾಗಿ ಯೆಹೋವನಿಗೆ ಅರ್ಪಿಸುವ ಕಾಣಿಕೆಗಳ ಜೊತೆಗೆ ಅವುಗಳನ್ನು ಅರ್ಪಿಸಬೇಕು. ನೀವು ಯೆಹೋವನಿಗೆ ಅರ್ಪಿಸುವ ಯಾವುದೇ ವಿಶೇಷ ಸಮರ್ಪಣೆಗಳೊಂದಿಗೆ ಅವುಗಳನ್ನು ಸಮರ್ಪಿಸಬೇಕು.
ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು.