ಅರಣ್ಯಕಾಂಡ 28:27 - ಪರಿಶುದ್ದ ಬೈಬಲ್27 ಆ ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ಒಂದು ವರ್ಷದ ಏಳು ಕುರಿಗಳು ಇವುಗಳನ್ನೂ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಆ ದಿನ ಸರ್ವೇಶ್ವರನಿಗೆ ಸುಗಂಧ ಸುವಾಸನೆಯುಂಟು ಮಾಡುವುದಕ್ಕಾಗಿ ಎರಡು ಹೋರಿ, ಒಂದು ಟಗರು, ಹಾಗು ವರ್ಷದ ಏಳು ಕುರಿ ಇವುಗಳನ್ನು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ವರುಷದ ಏಳು ಕುರಿ ಇವುಗಳನ್ನೂ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ, ಅಧ್ಯಾಯವನ್ನು ನೋಡಿ |
ಅಮಾವಾಸ್ಯೆಯಲ್ಲಿ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆ ಇವುಗಳಲ್ಲದೆ ಈ ಅರ್ಪಣೆಗಳನ್ನು ಅರ್ಪಿಸಬೇಕು. ಇವುಗಳನ್ನು ನಿಯಮಗಳ ಪ್ರಕಾರವಾಗಿ ಮಾಡಬೇಕು. ಅವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇವೆ.