ಅರಣ್ಯಕಾಂಡ 23:21 - ಪರಿಶುದ್ದ ಬೈಬಲ್21 ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ. ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ. ಯೆಹೋವನೇ ಅವರ ದೇವರು. ಆತನು ಅವರೊಂದಿಗಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಈ ಯಾಕೋಬನಲ್ಲಿ ಯಾವ ಆಪತ್ತಿನ ಸೂಚನೆಯೂ ಕಾಣುವುದಿಲ್ಲ ಅಥವಾ ಇಸ್ರಾಯೇಲರಿಗೆ ಯಾವ ವಿಪತ್ತಿನ ಸೂಚನೆಯೂ ತೋರುವುದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡ ಇದ್ದಾನೆ, ಅವರು ತಮ್ಮ ಅರಸನಿಗಾಗಿ ಮಾಡುವ ಜಯ ಘೋಷವು ಕೇಳಿಸುತ್ತ ಇದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಈ ಯಕೋಬ್ಯರಲ್ಲಿಲ್ಲ ಆಪತ್ತಿನ ಸೂಚನೆ ಈ ಇಸ್ರಯೇಲರಲ್ಲಿಲ್ಲ ವಿಪತ್ತಿನ ಸಾಧ್ಯತೆ ಸರ್ವೇಶ್ವರನೇ ಇಹನು ಅವರ ಸಂಗಡ ದೇವರಾಗಿ ಜಯಘೋಷ ಕೇಳಿಸುತ್ತಿದೆ ಅವರ ಅರಸನಿಗಾಗಿ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಯಾಕೋಬ್ಯರಲ್ಲಿ ಯಾವ ಆಪತ್ತಿನ ಸೂಚನೆಯೂ ಇಲ್ಲ; ಇಸ್ರಾಯೇಲ್ಯರಿಗೆ ವಿಪತ್ತು ಸಂಭವಿಸುವ ಹಾಗೆ ತೋರುವದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡಲೇ ಇದ್ದಾನೆ; ಅವರು ತಮ್ಮ ಅರಸನಿಗೋಸ್ಕರ ಮಾಡುವ ಜಯಘೋಷವು ಕೇಳಿಸುತ್ತಲೇ ಇದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 “ಯೆಹೋವ ದೇವರು ಯಾಕೋಬನಲ್ಲಿ ಆಪತ್ತನ್ನು ಕಾಣಲಿಲ್ಲ. ಇಸ್ರಾಯೇಲಿನಲ್ಲಿ ವಿಪತ್ತನ್ನು ನೋಡಲಿಲ್ಲ. ಅವರ ದೇವರಾದ ಯೆಹೋವ ದೇವರು ಅವರ ಸಂಗಡ ಇದ್ದಾರೆ. ಅರಸನ ಜಯಧ್ವನಿಯು ಅವರಲ್ಲಿ ಉಂಟು. ಅಧ್ಯಾಯವನ್ನು ನೋಡಿ |
ಆಗ ಗಿದ್ಯೋನನು, “ಸ್ವಾಮೀ, ಯೆಹೋವನು ನಮ್ಮ ಸಂಗಡವಿದ್ದರೆ ನಮಗೆ ಇಷ್ಟೊಂದು ಕಷ್ಟಗಳೇಕೆ ಬರುತ್ತವೆ? ನಮ್ಮ ಪೂರ್ವಿಕರಿಗಾಗಿ ಆತನು ಬಹಳಷ್ಟು ಅದ್ಭುತಕಾರ್ಯಗಳನ್ನು ಮಾಡಿದ್ದನೆಂದು ನಾವು ಕೇಳಿದ್ದೇವೆ. ಆತನು ಅವರನ್ನು ಈಜಿಪ್ಟಿನಿಂದ ಹೊರಗೆ ಕರೆತಂದನೆಂದು ನಮ್ಮ ಪೂರ್ವಿಕರು ನಮಗೆ ಹೇಳಿದರು. ಆದರೆ ಈಗ ಯೆಹೋವನು ನಮ್ಮನ್ನು ಕೈಬಿಟ್ಟಿದ್ದಾನೆ; ಮಿದ್ಯಾನ್ಯರು ನಮ್ಮನ್ನು ಸೋಲಿಸುವಂತೆ ಮಾಡಿದ್ದಾನೆ” ಎಂದು ಹೇಳಿದನು.
ಕೆಂದರೆ ಬಲಿಷ್ಠನಾದ ಯೆಹೋವನು ಅಲ್ಲಿದ್ದಾನೆ. ಆ ದೇಶವು ತೊರೆಗಳೂ ಅಗಲವಾಗಿ ಹರಿಯುವ ನದಿಗಳೂ ಇರುವ ದೇಶವಾಗಿದೆ. ಆದರೆ ಆ ನದಿಯಲ್ಲಿ ವೈರಿಯ ದೋಣಿಯಾಗಲಿ, ಹಡಗುಗಳಾಗಲಿ ಇರುವದಿಲ್ಲ. ಆ ಹಡುಗುಗಳಲ್ಲಿ ಕೆಲಸಮಾಡುವವರೇ, ನೀವು ಅದರ ಹಗ್ಗಗಳಲ್ಲಿ ಕೆಲಸಮಾಡುವದನ್ನು ಬಿಟ್ಟುಬಿಡಿರಿ. ಹಡಗಿನ ಸ್ತಂಭವನ್ನು ನೀವು ಬಲಪಡಿಸಲಾರಿರಿ. ಹಡಗಿನ ಹಾಯಿಗಳನ್ನು ನಿಮ್ಮಿಂದ ತೆರೆಯಲು ಆಗುವದಿಲ್ಲ. ಯಾಕೆಂದರೆ ದೇವರೇ ನಮ್ಮ ನ್ಯಾಯಾಧೀಶನು. ಆತನು ಧರ್ಮಶಾಸ್ತ್ರವನ್ನು ಸಿದ್ಧಪಡಿಸಿದಾತನು. ಯೆಹೋವನೇ ನಮ್ಮ ಅರಸನು. ಆತನೇ ನಮ್ಮನ್ನು ರಕ್ಷಿಸುವನು, ನಮಗೆ ಸಂಪತ್ತನ್ನು ದಯಪಾಲಿಸುವನು. ಕೈಕಾಲು ಊನವಾದವರೂ ಸಹ ಯುದ್ಧದಲ್ಲಿ ಸಂಪತ್ತನ್ನು ಗಳಿಸುವರು.