Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 20:3 - ಪರಿಶುದ್ದ ಬೈಬಲ್‌

3 ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತುಹೋದಾಗಲೇ ನಾವೂ ಸಹ ಸತ್ತುಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 “ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧುಬಳಗದವರು ಸತ್ತಂತೆ ನಾವೂ ಸತ್ತುಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು ಎಂದೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಸಹೋದರರು ಯೆಹೋವ ದೇವರ ಮುಂದೆ ಸತ್ತು ಹೋದಾಗಲೇ, ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 20:3
13 ತಿಳಿವುಗಳ ಹೋಲಿಕೆ  

ಆದ್ದರಿಂದ ಅವರು ಮೋಶೆಗೆ ವಿರುದ್ಧವಾಗಿ ದಂಗೆ ಎದ್ದು ಅವನೊಡನೆ ವಾಗ್ವಾದ ಮಾಡತೊಡಗಿದರು. “ನಮಗೆ ಕುಡಿಯಲು ನೀರು ಕೊಡು” ಎಂದು ಅವರು ಕೇಳಿದರು. ಮೋಶೆ ಅವರಿಗೆ, “ನೀವು ಯಾಕೆ ನನಗೆ ವಿರುದ್ಧವಾಗಿ ದಂಗೆಯೆದ್ದಿರಿ? ನೀವು ಯಾಕೆ ಯೆಹೋವನನ್ನು ಪರೀಕ್ಷಿಸುತ್ತಿದ್ದೀರಿ? ಯೆಹೋವನು ನಮ್ಮೊಡನೆ ಇಲ್ಲವೆಂದು ನೀವು ಭಾವಿಸುತ್ತೀರೋ?” ಎಂದು ಹೇಳಿದನು.


ಕೋರಹನೂ ಸೇರಿದಂತೆ ಆ ಕಾಯಿಲೆಯಿಂದ ಸತ್ತವರು ಹದಿನಾಲ್ಕು ಸಾವಿರದ ಏಳುನೂರು ಮಂದಿ.


ಜನರು ತಮಗೆ ತೊಂದರೆ ಉಂಟಾಯಿತೆಂದು ಗಟ್ಟಿಯಾಗಿ ಗುಣುಗುಟ್ಟಿದರು. ಅದನ್ನು ಯೆಹೋವನು ಕೇಳಿ ಕೋಪಗೊಂಡನು. ಯೆಹೋವನಿಂದ ಬಂದ ಬೆಂಕಿ ಅವರ ವಿರುದ್ಧವಾಗಿ ಹೊತ್ತಿಕೊಂಡದ್ದರಿಂದ ಪಾಳೆಯದ ಹೊರಭಾಗದಲ್ಲಿದ್ದವರು ಸುಟ್ಟುಹೋದರು.


ಬರಗಾಲದ ನಿಮಿತ್ತ ಸತ್ತವರಿಗಿಂತಲೂ ಖಡ್ಗಗಳಿಂದ ಹತರಾದವರ ಸಾವೇ ಮೇಲಾಗಿತ್ತು. ಹಸಿವೆಯಿಂದಿದ್ದ ಜನರು ನೋವಿನಿಂದ ನರಳಾಡಿದರು. ಭೂಮಿಯಿಂದ ಆಹಾರವನ್ನು ಪಡೆಯಲಾಗದೆ ಅವರು ಸತ್ತುಹೋದರು.


ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು.


ಅವರು ಆತನಿಗೆ ವಿರೋಧವಾಗಿ ಮಾತಾಡಿ, “ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?


ಅವರು ಆತನಿಗೆ (ದೇವಾರಾತ್ಮನಿಗೆ) ವಿರೋಧವಾಗಿ ನಿಂತರು. ಇದರಿಂದ ಬೇಸರಗೊಂಡಿದ್ದ ಮೋಶೆಯು ದುಡುಕಿ ಮಾತಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು