Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 16:40 - ಪರಿಶುದ್ದ ಬೈಬಲ್‌

40 ಆರೋನನ ಕುಟುಂಬದವನು ಮಾತ್ರ ಯೆಹೋವನ ಎದುರಿನಲ್ಲಿ ಧೂಪವನ್ನು ಹಾಕತಕ್ಕದ್ದು ಮತ್ತು ಬೇರೆ ಯಾರಾದರೂ ಹಾಕಿದರೆ ಅವರು ಕೋರಹ ಮತ್ತು ಅವನ ಹಿಂಬಾಲಕರಂತೆ ಸಾಯುವರು ಎಂಬುದನ್ನು ಇಸ್ರೇಲರಿಗೆ ಆ ಮುಚ್ಚಳವು ನೆನಪು ಮಾಡುವ ಗುರುತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಆರೋನನ ಸಂತತಿಯವರಲ್ಲದೆ ಇತರರು ಸರ್ವೇಶ್ವರನ ಸನ್ನಿಧಿಗೆ ಬಂದು ಧೂಪವನ್ನು ಅರ್ಪಿಸಬಾರದು; ಅರ್ಪಿಸಿದರೆ ಕೋರಹನಿಗೂ ಅವನ ಪಂಗಡದವರಿಗೂ ಆದ ಗತಿಗೆ ಗುರಿಯಾಗುವರು ಎಂದು ಇಸ್ರಯೇಲರಿಗೆ ಎಚ್ಚರಿಕೆ ನೀಡುವ ಚಿನ್ಹೆಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆರೋನನ ಸಂತತಿಯವರಲ್ಲದ ಇತರರಲ್ಲಿ ಯಾರೂ ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು; ಸಮರ್ಪಿಸಿದರೆ ಕೋರಹನಿಗೂ ಅವನ ಜೊತೆಗಾರರಿಗೂ ಉಂಟಾದ ಗತಿಗೆ ಗುರಿಯಾದಾರೆಂದು ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸುವದಕ್ಕಾಗಿ ಅದು ಗುರುತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆರೋನನ ಸಂತಾನವಲ್ಲದ ಪರಕೀಯನು ಯೆಹೋವ ದೇವರ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸಬಾರದು, ಅರ್ಪಿಸಿದರೆ ಕೋರಹ ಮತ್ತು ಅವನ ಸಮೂಹಕ್ಕೆ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವದಕ್ಕಾಗಿ ಅದು ಗುರುತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 16:40
16 ತಿಳಿವುಗಳ ಹೋಲಿಕೆ  

“ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸು. ಅವರು ತಮ್ಮತಮ್ಮ ಯಾಜಕ ಉದ್ಯೋಗವನ್ನು ಕಾಪಾಡಿಕೊಳ್ಳಬೇಕು. ಯಾಜಕರ ಕರ್ತವ್ಯಗಳನ್ನು ಮಾಡಲು ಪವಿತ್ರ ವಸ್ತುಗಳ ಬಳಿಗೆ ಬರಲು ಬೇರೆ ಯಾವನಾದರೂ ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.”


ಅವರಿಗೆ ದುರ್ಗತಿಯಾಗುವುದು. ಈ ಜನರು ಕಾಯಿನನ ಮಾರ್ಗವನ್ನು ಅನುಸರಿಸುತ್ತಾರೆ. ಇವರು ದ್ರವ್ಯ ಸಂಪಾದನೆಗಾಗಿ, ಬಿಳಾಮನ ತಪ್ಪುಮಾರ್ಗದಲ್ಲಿ ನಡೆಯಲು ತಮ್ಮನ್ನೇ ಒಪ್ಪಿಸಿಕೊಟ್ಟಿದ್ದಾರೆ. ಕೋರಹನು ಮಾಡಿದಂತೆ ಈ ಜನರೂ ದೇವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಅವರು ಕೋರಹನಂತೆ ನಾಶವಾಗುತ್ತಾರೆ.


ಮೋಶೆ, ಆರೋನ ಮತ್ತು ಆರೋನನ ಪುತ್ರರು ದೇವದರ್ಶನಗುಡಾರದ ಮುಂದೆ ಪವಿತ್ರ ಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯಮಾಡಿಕೊಂಡರು. ಪವಿತ್ರಸ್ಥಳವನ್ನು ನೋಡಿಕೊಳ್ಳುವ ಕೆಲಸ ಅವರಿಗೆ ಕೊಡಲ್ಪಟ್ಟಿತು. ಅವರು ಇಸ್ರೇಲರೆಲ್ಲರಿಗೋಸ್ಕರ ಇದನ್ನು ಮಾಡಿದರು. ಇವರ ಕರ್ತವ್ಯಗಳನ್ನು ಬೇರೆ ಯಾವನಾದರೂ ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.


ಪವಿತ್ರ ಗುಡಾರವನ್ನು ತೆಗೆದುಕೊಂಡು ಹೋಗುವಾಗಲೆಲ್ಲಾ ಲೇವಿಯರೇ ಅದನ್ನು ಬಿಚ್ಚಬೇಕು, ಇಳಿಸುವಾಗಲೆಲ್ಲಾ ಲೇವಿಯರೇ ಅದನ್ನು ಹಾಕಬೇಕು. ಪವಿತ್ರ ಗುಡಾರವನ್ನು ನೋಡಿಕೊಳ್ಳುವವರು ಅವರೇ. ಲೇವಿ ಕುಲಕ್ಕೆ ಸೇರದ ಯಾವನಾದರೂ ಅದರ ಸಮೀಪಕ್ಕೆ ಬಂದರೆ, ಅವನಿಗೆ ಮರಣಶಿಕ್ಷೆಯಾಗಬೇಕು.


ಯಾಜಕರ ಕುಟುಂಬದ ಜನರು ಮಾತ್ರವೇ ನೈವೇದ್ಯ ಪದಾರ್ಥಗಳನ್ನು ತಿನ್ನಬಹುದು. ಯಾಜಕನೊಂದಿಗೆ ಇಳಿದುಕೊಂಡವನಾಗಲಿ ಕೂಲಿಯಾಳಾಗಲಿ ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು.


ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು.


ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಿದನು.


ಅದಕ್ಕೆ ನೀವು, ‘ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಜೋರ್ಡನ್ ನದಿಯನ್ನು ದಾಟುತ್ತಿರುವಾಗ ಹರಿಯುವ ನೀರು ನಿಂತುಹೋಯಿತು’ ಎಂದು ಹೇಳಿರಿ. ಆ ಕಲ್ಲುಗಳು ಇಸ್ರೇಲರಿಗೆ ಸದಾಕಾಲ ಸಾಕ್ಷಿಗಳಾಗಿರುತ್ತವೆ” ಎಂದು ಹೇಳಿದನು.


ಇವರು ಹುಡುಕಿದರೂ ತಮ್ಮ ವಂಶಾವಳಿ ಪತ್ರವನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ಇವರು ಅಶುದ್ಧರೆಂದು ಪರಿಗಣಿಸಲ್ಪಟ್ಟು ಯಾಜಕತ್ವದಿಂದ ತಳ್ಳಲ್ಪಟ್ಟರು.


ಆದರೆ ಉತ್ತರಕ್ಕೆ ಅಭಿಮುಖವಾಗಿರುವ ಕೋಣೆಯು ಯಜ್ಞವೇದಿಯಲ್ಲಿ ಕಾರ್ಯವಹಿಸುತ್ತಿರುವ ಯಾಜಕರಿಗಾಗಿ, ಯಾಜಕರೆಲ್ಲರೂ ಲೇವಿ ಕುಲದವರಾಗಿದ್ದಾರೆ. ಎರಡನೇ ಗುಂಪಿನ ಯಾಜಕರು ಚಾದೋಕನ ಸಂತತಿಯವರಾಗಿದ್ದರು. ಅವರು ಮಾತ್ರವೇ ಯಜ್ಞವೇದಿಯಲ್ಲಿ ಯಜ್ಞಾರ್ಪಣೆ ಮಾಡಬಹುದು” ಎಂದು ಹೇಳಿದನು.


ಚಾದೋಕನ ಸಂತತಿಯ ಯಾಜಕರ ಪಾಪಪರಿಹಾರಕ್ಕಾಗಿ ನೀನು ಒಂದು ಎಳೆ ಹೋರಿಯನ್ನು ಅರ್ಪಿಸು. ಇವರು ಲೇವಿಕುಲದ ಯಾಜಕರು. ಇವರು ನನಗೆ ಕಾಣಿಕೆಗಳನ್ನು ಅರ್ಪಿಸುವ ಸೇವೆ ಮಾಡುವವರಾಗಿರುತ್ತಾರೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ.


ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು