ಅರಣ್ಯಕಾಂಡ 15:3 - ಪರಿಶುದ್ದ ಬೈಬಲ್3 ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ನಿಮ್ಮ ಮಂದೆಯಿಂದಾಗಲಿ ಹಿಂಡಿನಿಂದಾಗಲಿ ಅಗ್ನಿಯ ಮೂಲಕ ಯಜ್ಞವನ್ನರ್ಪಿಸುವವನು ಸರ್ವಾಂಗಹೋಮ ಮಾಡಿದರೂ ಅಥವಾ ಸಮಾಧಾನಯಜ್ಞಮಾಡಿದರೂ ಹರಕೆಯ ಯಜ್ಞಮಾಡಿದರೂ ಅಥವಾ ಸ್ವಇಚ್ಛೆಯಿಂದ ಯಜ್ಞಮಾಡಿದರೂ ನಿಯಮಿತ ಹಬ್ಬಗಳಲ್ಲಿ ಯಜ್ಞಮಾಡಿದರೂ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಪಶುಗಳಿಂದಾಗಲಿ, ಆಡುಕುರಿ ಹಿಂಡುಗಳಿಂದಾಗಲಿ ಒಂದು ಪಶುವನ್ನು ಹೋಮಮಾಡುವವನು, ಸರ್ವಾಂಗಹೋಮ ಮಾಡುವುದಕ್ಕೂ, ಹರಕೆಸಲ್ಲಿಸುವುದಕ್ಕೂ, ಕೃತಜ್ಞತೆಯನ್ನು ತೋರಿಸುವುದಕ್ಕೂ, ಹಬ್ಬವನ್ನು ಆಚರಿಸುವುದಕ್ಕೂ ಸಮಾಧಾನಯಜ್ಞಮಾಡಿದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸರ್ವೇಶ್ವರನಾದ ನನಗೆ ಸುವಾಸನೆಯ ಕಾಣಿಕೆಯಾಗಿ ದನಕರುಗಳಿಂದ ಬಲಿಯನ್ನು ಅರ್ಪಿಸುವಾಗ ಅದು ಹರಕೆಯ, ಕೃತಜ್ಞತೆಯ ಹಬ್ಬಾಚರಣೆಯ, ಶಾಂತಿಸಮಾಧಾನದ ಬಲಿಯಾಗಿರಲಿ ಅಥವಾ ದಹನಬಲಿಯಾಗಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕಾಗಿ ದನಗಳಲ್ಲಾಗಲಿ ಆಡುಕುರಿಗಳಲ್ಲಾಗಲಿ ಒಂದು ಪಶುವನ್ನು ಹೋಮಮಾಡುವವನು ಸರ್ವಾಂಗ ಹೋಮಮಾಡಿದರೂ ಸರಿಯೇ, ಹರಕೆ ಸಲ್ಲಿಸುವದಕ್ಕೋ ಕೃತಜ್ಞತೆಯನ್ನು ತೋರಿಸುವದಕ್ಕೋ ಹಬ್ಬವನ್ನು ಆಚರಿಸುವದಕ್ಕೋ ಸಮಾಧಾನಯಜ್ಞ ಮಾಡಿದರೂ ಸರಿಯೇ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಯೆಹೋವ ದೇವರಿಗೆ ಪಶುಗಳಿಂದಾದರೂ ಕುರಿಗಳಿಂದಾದರೂ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ, ಹರಕೆಯನ್ನು ಈಡೇರಿಸುವ ಬಲಿಯನ್ನಾಗಲಿ, ಉಚಿತವಾದ ಸಮರ್ಪಣೆಯಾಗಲಿ, ನಿಮ್ಮ ಪವಿತ್ರ ಹಬ್ಬಗಳಲ್ಲಿಯಾಗಲಿ ಯೆಹೋವ ದೇವರಿಗೆ ಬೆಂಕಿಯಿಂದ ಅರ್ಪಿಸಲಾಗಲಿ. ಅಧ್ಯಾಯವನ್ನು ನೋಡಿ |