ಅರಣ್ಯಕಾಂಡ 14:13 - ಪರಿಶುದ್ದ ಬೈಬಲ್13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅದಕ್ಕೆ ಮೋಶೆಯು ಯೆಹೋವನಿಗೆ, “ನೀನು ಹೀಗೆ ಮಾಡುವುದಾದರೆ ಐಗುಪ್ತ್ಯರು ಈ ಸುದ್ದಿಯನ್ನು ಕೇಳುವರು. ಅವರ ಕೈಯಿಂದ ನೀನು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಈ ಸಂಗತಿಯನ್ನು ಈ ಕಾನಾನ್ ದೇಶದ ನಿವಾಸಿಗಳಿಗೆ ತಿಳಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅದಕ್ಕೆ ಮೋಶೆ: “ನೀವು ಹಾಗೆ ಮಾಡುವುದಾದರೆ ಈಜಿಪ್ಟಿನವರು ಈ ಸಮಾಚಾರವನ್ನು ಕೇಳುವರು. ಅವರ ಕೈಯಿಂದ ನೀವು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಸಂಗತಿಯನ್ನು ಈ ಕಾನಾನ್ ನಾಡಿನ ನಿವಾಸಿಗಳಿಗೆ ತಿಳಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅದಕ್ಕೆ ಮೋಶೆ - ನೀನು ಹೀಗೆ ಮಾಡುವದಾದರೆ ಐಗುಪ್ತ್ಯರು ಈ ಸಮಾಚಾರವನ್ನು ಕೇಳುವರು. ನೀನು ತಮ್ಮ ಕೈಯೊಳಗಿಂದ ಈ ಜನವನ್ನು ಭುಜಪರಾಕ್ರಮದಿಂದ ತಪ್ಪಿಸಿದ ಸಂಗತಿಯನ್ನು ಈ [ಕಾನಾನ್] ದೇಶದ ನಿವಾಸಿಗಳಿಗೆ ತಿಳಿಸಿರುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ! ಅಧ್ಯಾಯವನ್ನು ನೋಡಿ |