43 ನೀವು ನಿಮ್ಮೊಂದಿಗೆ ಮೊಲೋಖನ (ಸುಳ್ಳುದೇವರ) ಗುಡಾರವನ್ನು ಮತ್ತು ನಿಮ್ಮ ರೇಫಾ ದೇವತೆಯ ನಕ್ಷತ್ರರೂಪವನ್ನು ಹೊತ್ತುಕೊಂಡು ಹೋದಿರಿ. ಆರಾಧಿಸುವುದಕ್ಕಾಗಿ ನೀವು ಮಾಡಿಕೊಂಡ ವಿಗ್ರಹಗಳೇ ಇವು. ಆದ್ದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಕಳುಹಿಸಿಬಿಡುವೆನು.’
43 ಅದಕ್ಕೆ ಬದಲಾಗಿ ನೀವು ಆರಾಧಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೆಫಾನ್ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋಗುತ್ತಿದ್ದಿರಲ್ಲಾ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಗಡಿಪಾರು ಮಾಡುವೆನು’ ಎಂಬುದೇ ಆಗಿದೆ.
43 ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ.
43 ಅದಕ್ಕೆ ಬದಲಾಗಿ ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಗಡೀಪಾರು ಮಾಡುವೆನು ಎಂಬದು.
43 ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರವನ್ನೂ ನೀವು ನಿರ್ಮಿಸಿಕೊಂಡ ವಿಗ್ರಹಗಳನ್ನೂ ಪೂಜಿಸಿದಿರಿ. ಆದ್ದರಿಂದ ಬಾಬಿಲೋನಿನ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ,’ ಎಂದು ಬರೆದಿರುವ ಪ್ರಕಾರ ಇದು ನೆರವೇರಿತು.
ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು. ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು.
ಅಶ್ಶೂರದ ರಾಜನು ಇಸ್ರೇಲರನ್ನು, ಸೆರೆಯಾಳುಗಳನ್ನಾಗಿ ಅಶ್ಶೂರಿಗೆ ಒಯ್ದನು. ಅವನು ಅವರನ್ನು ಹಲಹು ಎಂಬ ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ವಾಸಿಸುವಂತೆ ಮಾಡಿದನು.
ಸೊಲೊಮೋನನು ಕೆಮೋಷನನ್ನು ಆರಾಧಿಸಲು ಒಂದು ಸ್ಥಳವನ್ನು ನಿರ್ಮಿಸಿದನು. ಮೋವಾಬ್ಯರ ಭಯಂಕರ ವಿಗ್ರಹವೇ ಕೆಮೋಷ್. ಜೆರುಸಲೇಮಿನ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಸೊಲೊಮೋನನು ಆರಾಧನೆಯ ಸ್ಥಳವನ್ನು ನಿರ್ಮಿಸಿದನು. ಆ ಬೆಟ್ಟದ ಮೇಲೆಯೇ ಸೊಲೊಮೋನನು ಮೋಲೆಕ್ ದೇವತೆಯ ಪೂಜಾಸ್ಥಳವನ್ನು ನಿರ್ಮಿಸಿದನು. ಅಮ್ಮೋನಿಯರ ಭಯಂಕರ ವಿಗ್ರಹವೇ ಮೋಲೆಕ್.
“ಬೆನ್‌ಹಿನ್ನೊಮ್ ಕಣಿವೆಯಲ್ಲಿ ಅವರು ಸುಳ್ಳುದೇವರಾದ ಬಾಳನಿಗಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿದ್ದಾರೆ. ತಮ್ಮ ಮಕ್ಕಳನ್ನು ಆಹುತಿಕೊಡುವದಕ್ಕಾಗಿ ಈ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಇಂಥಾ ಭಯಂಕರವಾದ ಕೆಲಸವನ್ನು ಮಾಡಲು ನಾನು ಅವರಿಗೆ ಆಜ್ಞಾಪಿಸಿಲ್ಲ. ಯೆಹೂದದ ಜನರು ಇಂಥಾ ಭಯಂಕರವಾದ ಕಾರ್ಯವನ್ನು ಮಾಡುವರೆಂದು ನಾನೆಂದೂ ಊಹಿಸಿರಲಿಲ್ಲ.