ಅಪೊಸ್ತಲರ ಕೃತ್ಯಗಳು 27:7 - ಪರಿಶುದ್ದ ಬೈಬಲ್7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ನೌಕಾಯಾನ ಮಾಡಿದೆವು. ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸ್ನೀಡ ಪಟ್ಟಣವನ್ನು ತಲುಪುವುದೇ ಕಷ್ಟವಾಯಿತು. ಆ ಮಾರ್ಗದಲ್ಲಿ ಇನ್ನೂ ಮುಂದೆ ಪ್ರಯಾಣ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಸಾಲ್ಮೊನೆಯ ಸಮೀಪದಲ್ಲಿದ್ದ ಕ್ರೇಟ್ ದ್ವೀಪದ ದಕ್ಷಿಣದ ಭಾಗದಲ್ಲಿ ನೌಕಾಯಾನ ಮಾಡಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅನೇಕ ದಿನಗಳ ಕಾಲ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಸಮೀಪವಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದುದರಿಂದ ಕ್ರೇತ ದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಸಮೀಪವಾಗಿ ಬಂದು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ಪ್ರಯಾಣಮಾಡಿದೆವು. ಅತಿ ಕಷ್ಟದಿಂದ ‘ಸ್ನೀಡ’ ಎಂಬ ಊರಿಗೆ ಎದುರಾಗಿ ಬಂದೆವು. ಆ ದಿಸೆಯಲ್ಲಿ ಪ್ರಯಾಣಮಾಡಲು ಎದುರುಗಾಳಿ ನಮ್ಮನ್ನು ಬಿಡಲಿಲ್ಲ. ಆದ್ದರಿಂದ ನಾವು ಸಾಲ್ಮೋನೆ ಭೂಶಿರವನ್ನು ದಾಟಿ, ಕ್ರೇಟ್ ದ್ವೀಪದ ಮರೆಯನ್ನು ಸೇರಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಅನೇಕ ದಿವಸ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಎದುರಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದದರಿಂದ ಕ್ರೇತದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಎದುರಾಗಿ ಬಂದು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಅನೇಕ ದಿನಗಳವರೆಗೆ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಕ್ನೀದ ಪಟ್ಟಣ ಎಂಬಲ್ಲಿಗೆ ತಲುಪುವವರೆಗೆ ಬಹಳ ಪ್ರಯಾಸ ಪಡಬೇಕಾಯಿತು. ಎದುರುಗಾಳಿಯು ಅಡ್ಡಿಯಾದದ್ದರಿಂದ, ಸಲ್ಮೋನೆ ಭೂಶಿರವನ್ನು ದಾಟಿ, ಅದರ ಎದುರಾಗಿರುವ ಕ್ರೇತದ್ವೀಪವನ್ನು ತಲುಪಿದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್7 ಅಮಿ ಲೈ ದಿಸಾಂಚ್ಯಾ ಪತರ್ ಸಾವ್ಕಾಸ್ ಢೊನಿತ್ನಾ ಜಾಯ್ತ್ ಹೊತ್ತಾಂವ್ ಅಮಿ ಸ್ನಿಡ್ ಮನ್ತಲ್ಯಾ ಶಾರಾಕ್ ಲೈ ತರಾಸಾನ್ ಪಾವ್ತಲೆ ಹೊಲೆ ,ತನ್ನಾ ವಾರ್‍ಯಾನ್ ಅಮ್ಕಾ ಅಡ್ಕಳ್ ಕರ್ಲ್ಲ್ಯಾನ್, ತಸೆ ಹೊವ್ನ್, ಅಮಿ ಕ್ರೆಟ್ ದ್ಪಿಪಾಚ್ಯಾ ಜಗ್ಗೊಳ್ನಾ ಸಾಲ್ಮೊನೆತ್ನಾ ಪಾರ್ ಹೊವ್ನ್ ಗೆಲಾಂವ್. ಅಧ್ಯಾಯವನ್ನು ನೋಡಿ |